Wednesday, January 22, 2025
ಸುದ್ದಿ

ಆನಂದ್ ಸಿಂಗ್‌ ಹಲ್ಲೆ ಪ್ರಕರಣ: ಇನ್ನೂ ಸಿಕ್ಕಿಲ್ಲ ರೌಡಿ ಶಾಸಕ ಗಣೇಶ್ – ಕಹಳೆ ನ್ಯೂಸ್

ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಹಲ್ಲೆ ನಡೆಸಿದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಇನ್ನೂ ಪೋಲೀಸರ ಬಲೆಗೆ ಬಿದ್ದಿಲ್ಲ.

ತಲೆಮರೆಸಿಕೊಂಡಿರುವ ಕಂಪ್ಲಿ ಗಣೇಶ್ ಹುಡುಕಾಟಕ್ಕಾಗಿ ಪೊಲೀಸರು ನಾಲ್ಕು ತಂಡ ರಚಿಸಿದ್ದರು. ಆದ್ರೆ ಇದೀಗ ಬಳ್ಳಾರಿ, ಬೆಂಗಳೂರು, ಮೈಸೂರು, ರಾಮನಗರದಲ್ಲಿ ಹುಡುಕಾಟ ನಡೆಸಿ ಕಂಪ್ಲಿ ಗಣೇಶ್ ಸುಳಿವು ಸಿಗದೆ ನಾಲ್ಕು ತಂಡವೂ ವಾಪಸ್ ಆಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಬಿಡದಿ ಸಮೀಪ ಇರುವ ಈಗಲ್‌ಟನ್ ರೆಸಾರ್ಟ್ನಲ್ಲಿ ನಡೆದ ಶಾಸಕರ ನಡುವಿನ ಗಲಾಟೆಯಲ್ಲಿ ಆನಂದ್ ಸಿಂಗ್ ಗಾಯಗೊಂಡಿದ್ದರು.ಇದೀಗ ಕಂಪ್ಲಿ ಗಣೇಶರನ್ನ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು