Tuesday, November 26, 2024
ಸುದ್ದಿ

ನಮ್ಮ ಪರಂಪರೆಯಲ್ಲಿ ದೇವರಿಗಿಂತಲೂ ಮಿಗಿಲಾದ ಸ್ಥಾನ ಭಕ್ತನಿಗಿದೆ: ಡಾ.ಮನಮೋಹನ – ಕಹಳೆ ನ್ಯೂಸ್

ಪುತ್ತೂರು: ನಮ್ಮ ಪರಂಪರೆಯಲ್ಲಿ ದೇವರಿಗಿಂತಲೂ ಆತನ ಭಕ್ತನಿಗೆ ಮಿಗಿಲಾದ ಸ್ಥಾನ ಕಲ್ಪಿಸಿರುವುದನ್ನು ಕಾಣುತ್ತೇವೆ. ಅದಕ್ಕೆ ಸ್ಪಷ್ಟ ಉದಾಹರಣೆ ಹನುಮಂತ. ಇಂದು ನಮ್ಮ ಸಮಾಜದಲ್ಲಿ ರಾಮ ಮಂದಿರಕ್ಕಿಂತ ಅಧಿಕ ಆಂಜನೇಯ ಮಂದಿರವೇ ಇರುವುದು ಇದಕ್ಕೆ ಸಾಕ್ಷಿ.

ಮಕ್ಕಳಿಂದ ತೊಡಗಿ ವಯಸ್ಕರ ವರೆಗೆ ಹನುಮಂತ ವಿವಿಧ ಆಯಾಮಗಳಲ್ಲಿ ಸ್ಪೂರ್ತಿ ತುಂಬುವವನು ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಾಲೇಜಿನ ಹಿಂದಿ ಸಂಘುದ ಆಶ್ರಯದಲ್ಲಿ ನಡೆದ ‘ಹನುಮಾನ್ ಚಾಲಿಸ್’ ಪಠನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವರನ್ನು ಸುಲಭವಾಗಿ ತಲುಪಲು ಇರುವ ಮಾರ್ಗವೆಂದರೆ, ದೇವರನ್ನು ಭಜಿಸುವುದು. ನಮ್ಮ ಮನಸ್ಸು ಹಗುರವಾಗಬೇಕಾರೆ ದಿನದಲ್ಲಿ ಎರಡು ಬಾರಿ ಹನುಮಾನ್ ಚಾಲಿಸ್ ಪಠಣ ಮಾಡಬೇಕು. ನಾವು ಮಾಡುವ ಕೆಲಸದಲ್ಲಿ ಹನುಮಂತನನ್ನು ಸ್ಪೂರ್ತಿಯಾಗಿಟ್ಟುಬೇಕು. ಆಗ ಹೊಸತೊಂದು ಶಕ್ತಿ ನಮ್ಮೊಳಗೆ ಉದಯಿಸುವುದಕ್ಕೆ ಸಾಧ್ಯ. ಜತೆಗೆ ಮನಸ್ಸು ಪ್ರಫುಲ್ಲಗೊಂಡು ಕೈಗೊಳ್ಳುವ ಕಾರ್ಯ ಸುಲಭವೂ, ಸುಲಲಿತವೂ ಆಗುತ್ತದೆ ಎಂದು ಹೇಳಿದರು.

ಹನುಮಂತ ತನ್ನ ಈಡೀ ಜೀವನವನ್ನೇ ರಾಮನಿಗಾಗಿ ಮುಡಿಪಾಗಿರಿಸಿದ. ಹನುಮಂತನ ಯೋಚನಾ ಶಕ್ತಿ ತುಂಬಾ ಸೂಕ್ಷ್ಮ ಮತ್ತು ಎಲ್ಲರಿಗಿಂತ ಮಿಗಿಲು. ಅಂತಹ ಬುದ್ಧಿ ನಮ್ಮದಾಗ ಬೇಕಾದರೆ ಹನುಮನ್ ಚಾಲಿಸ್ ಪಠನ ಮಾಡಬೇಕು ಮತ್ತು ಎಲ್ಲಾ ಗೊತ್ತಿದೆ ಎಂದು ಅಹಂಕಾರ ಪಡಬಾರದು. ನಾವು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಒಂದು ದಿನ ಸಿಕ್ಕೇ ಸಿಗುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಸಂಯೋಜಕಿ, ಹಿಂದಿ ವಿಭಾಗ ಮುಖ್ಯಸ್ಥೆ ಡಾ. ದುರ್ಗರತ್ನ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಆಗ ಮಾತ್ರ ನಮಗೆ ದೇವರು ಒಲಿಯಲು ಸಾಧ್ಯ. ನಮ್ಮ ದೇಶ ಕಾಯುವ ಸೈನಿಕರೂ ತಮ್ಮ ಆರಾಧ್ಯ ದೈವವಾಗಿ ಹನುಮಂತನನ್ನೇ ಇಟ್ಟುಕೊಳ್ಳುತ್ತಾರೆ. ಅಂತಹ ಒಳ್ಳೆಯ ಶಕ್ತಿ ಹಾಗೂ ಬುದ್ಧಿಯ ಪ್ರಚೋದಕನಾದ ಹನುಮಂತನ ಧ್ಯಾನ ನಮ್ಮ ಬದುಕಿನ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು. ಹಿಂದಿ ಉಪನ್ಯಾಸಕಿ ಪೂಜಾ ವೈ ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಗಳಾದ ಅಂಕಿತ, ಮಾನಸ ಮತ್ತು ಸಾತ್ವಿಕ ನಾಯಕ್ ಹನುಮಾನ್ ಚಾಲಿಸ್ ಪಠಣ ಮಾಡಿದರು. ವಿದ್ಯಾರ್ಥಿನಿಯರಾದ ಸಾತ್ವಿಕ ನಾಯಕ್ ಸ್ವಾಗತಿಸಿ, ವಿಧ್ಯಾಶ್ರೀ ವಂದಿಸಿದರು. ವಿದ್ಯಾರ್ಥಿನಿ ಉಜ್ವಲ್ ಜೈಸ್ವಾಲ್ ಕಾರ್ಯಕ್ರಮ ನಿರ್ವಹಿಸಿದರು.