Sunday, January 19, 2025
ಸಿನಿಮಾಸುದ್ದಿ

ಲೂಸ್ ಮಾದ ಮ್ಯಾರೀಡ್ ಲೈಫ್ ಆರಂಭ

ಬೆಂಗಳೂರು : ನಟ “ಲೂಸ್‌ ಮಾದ’ ಯೋಗಿ ಮದುವೆ ಇವತ್ತು ಬೆಳಿಗ್ಗೆ ಮುಗಿದಿದೆ. ಆರ್‌.ಆರ್‌.ನಗರ ಸಮೀಪದ ಕರಿಷ್ಮಾ ಹಿಲ್ಸ್‌ ರಸ್ತೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ, ಸಾಹಿತ್ಯ ಅವರನ್ನು ಮದುವೆಯಾಗಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು.

ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಹರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ ಕಾರ್ಯಕ್ರಮ ಮುಂಜಾನೆ 4ರವರೆಗೆ ನಡೆಯಿತು. ಆ ಬಳಿಕ ಎಲೆಶಾಸ್ತ್ರ ಸೇರಿದಂತೆ ಇತರೆ ಶಾಸ್ತ್ರಗಳನ್ನೂ ಯೋಗಿ ಕುಟುಂಬ ನೆರವೇರಿಸಿ, ಬೆಳಗ್ಗೆ 5ರಿಂದ 6ರವರೆಗೆ ಮುಹೂರ್ತದಲ್ಲಿ ಸಾಹಿತ್ಯ ಮತ್ತು ಯೋಗಿ ಸತಿ-ಪತಿಗಳಾದರು. ನಂತರ ಇಂದು ನೂತನ ವಧುವನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ. ಪುನಃ ಕಲ್ಯಾಣ ಮಂಟಪಕ್ಕೆ ಸಂಜೆ 6 ಗಂಟೆಗೆ ನವಜೋಡಿ ಹಿಂದಿರುಗಿ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
ಯೋಗಿ ಮತ್ತು ಸಾಹಿತ್ಯ ಹಲವು ವರ್ಷಗಳ ಸ್ನೇಹಿತರಾಗಿದ್ದು, ಆ ಸ್ನೇಹವು ಪ್ರೇಮಕ್ಕೆ ತಿರುಗಿ, ಆ ಪ್ರೇಮ ಮದುವೆಯಲ್ಲಿ ಸುಖಾಂತ್ಯವಾಗಿದೆ. ಸಾಹಿತ್ಯ ಮೂಲತಃ ಸಾಫ್ಟ್ ವೇರ್ ಎಂಜಿನಿಯರ್‌ ಆಗಿದ್ದಾರೆ. ಇದುವರಗೆ ಯೋಗಿಯ ಜೀವದ ಗೆಳತಿಯಾಗಿದ್ದ ಸಾಹಿತ್ಯ ಇನ್ನು ಮುಂದೆ ಸಂಗಾತಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response