Wednesday, January 22, 2025
ರಾಜಕೀಯಸುದ್ದಿ

ಬಿಜೆಪಿ ಮೇಲಿನ ದ್ವೇಷಕ್ಕೋಸ್ಕರ ಸಣ್ಣ ಪಕ್ಷವನ್ನು ಕಾಂಗ್ರೆಸ್‌ ಅವಲಂಬಿಸಿದೆ: ಪುಟ್ಟಸ್ವಾಮಿ ಟೀಕೆ – ಕಹಳೆ ನ್ಯೂಸ್

ರಾಜ್ಯದಲ್ಲಿ ಇಂದು ಯಾರೂ ಊಹಿಸದಂತಹ ಸರ್ಕಾರ ಆಳ್ವಿಕೆ ನಡೆಸುತ್ತಿದೆ. ಕೇವಲ 37 ಸೀಟು ಗೆದ್ದ ಒಂದು ಸಣ್ಣ ಪಕ್ಷದವರು ಆಳ್ವಿಕೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿ ಮೇಲಿನ ದ್ವೇಷಕ್ಕೋಸ್ಕರ ಸಣ್ಣ ಪಕ್ಷವನ್ನು ಅವಲಂಬಿಸಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಪುಟ್ಟಸ್ವಾಮಿ ಟೀಕಿಸಿದರು.

ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಕ್ಕೆ ಬರುತ್ತೇನೆ, ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸಿನಲ್ಲಿಯೂ ಕುಮಾರಸ್ವಾಮಿ ಅಂದುಕೊಂಡಿರಲಿಲ್ಲ. ಹಾಗಾಗಿ ಹಲವು ಆಶ್ವಾಸನೆಗಳನ್ನು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಅಚಾನಕ್ಕಾಗಿ ಮುಖ್ಯಮಂತ್ರಿಯಾದರು. ಈಗ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವುದು ಹೇಗೆ ಎಂದು ಅವರಿಗೆ ತಿಳಿಯುತ್ತಿಲ್ಲ. ಹಾಗಾಗಿ ಸರ್ಕಾರ ಬಿದ್ದರೆ ಬಹಳ ಸಂತೋಷ ಪಡುವವರು ಕುಮಾರಸ್ವಾಮಿಯವರೇ ಎಂದು ವ್ಯಂಗ್ಯವಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು