Wednesday, January 22, 2025
ಸುದ್ದಿ

ನಾಟೆಕಲ್ ಕಣಚೂರು ಆಸ್ಪತ್ರೆ ಬಳಿ ಮತ್ತೆ ಸದ್ದು ಮಾಡಿದ ನೈತಿಕ ಪೊಲೀಸ್ ಗಿರಿ – ಕಹಳೆ ನ್ಯೂಸ್

ಮಂಗಳೂರು: ಡ್ರೈವಿಂಗ್ ಶಾಲೆಯ ಶಿಕ್ಷಕ ದಂಪತಿಯ ಕಾರು ತಡೆದು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಸಮೀಪದ ನಾಟಿಕಲ್ ಕಣಚೂರು ಆಸ್ಪತ್ರೆ ಬಳಿ ನಡೆದಿದೆ.

ಥಾಮಸ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಡ್ರೈವಿಂಗ್ ಶಾಲೆ ನಡೆಸುತ್ತಿರುವ ಥಾಮಸ್ ಅವರು ತಮ್ಮ ಪತ್ನಿಯೊಂದಿಗೆ ಕಾರು ಚಾಲನೆ ಮಾಡುತ್ತಿದ್ದು, ಅದೇ ಕಾರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಾರು ಕಲಿಯಲು ಬಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೂವರು ಕಾರಿನಲ್ಲಿ ತೆರಳುವಾಗ, 50 ಕ್ಕೂ ಹೆಚ್ಚು ಮಂದಿ ಇದ್ದ ತಂಡವೊಂದು ಅನೈತಿಕ ಪೊಲೀಸ್ ಗಿರಿ ನಡೆಸಿದೆ.
ಕಾರು ತಡೆದು ಹಲ್ಲೆ ನಡೆಸಲಾಗಿದ್ದು, ಕಾರಿನ ಗಾಜುಗಳನ್ನು ಪುಡಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೊಣಾಜೆ ಠಾಣೆ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.