ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಮೈದಾನದಲ್ಲಿ ಫರ್‌ಪೇಸ್ಟ್ ಎಂಬ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿ ದ. ಕ, ಉಡುಪಿ ಜಿಲ್ಲೆಗಳ ನಾನಾ ಭಾಗಗಳಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದ ಮೆರುಗು ಹೆಚ್ಚಿಸಿದವು.
ಬಬ್ಲಿ ಬಬ್ಲಿ ಶ್ವಾನಗಳ ಲೋಕ. ಬಣ್ಣ ಬಣ್ಣದ ಬಟ್ಟೆ ತೊಟ್ಟು ಫುಲ್ ಮಿಂಚಿಂಗ್. ಪ್ರೇಕ್ಷಕರ ಬಾಯಲ್ಲಿ ವಾವ್ ಅನ್ನೊ ಉದ್ಗಾರ. ಚಪ್ಪಳೆಯ ನಾದಗಳ ಜೊತೆಗೆ ಶಿಲ್ಲೆಗಳ ಅಬ್ಬರ.
ನೆರೆದಿದ್ದ ವೀಕ್ಷಕರು ಶ್ವಾನದ ತುಂಟಾಟಗಳನ್ನು ಕಂಡು ಖುಷಿಪಟ್ಟರು. ಶ್ವಾನದ ಮಾಲಿಕರ ಜೊತೆಗೆ ಶ್ವಾನಗಳು ಹೆಜ್ಜೆ ಹಾಕ್ತಾ ಇದ್ದಂತೆ ಮನುಷ್ಯರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಇತ್ತು. ಇನ್ನು ನಾಯಿಗಳು ಸ್ಮಿಮ್ಮಿಂಗ್ ಫೂಲ್‌ನಲ್ಲಿ ಈಜಿ ಸೈ ಎನಿಸಿಕೊಂಡವು.
ಈ ಪ್ರದರ್ಶನವನ್ನ ನಾಯಿಗಳಿಗೆಂದೇ ವಿಶೇಷ ಆಯೋಜಿಸಲಾಗಿತ್ತು. ಶ್ವಾನಗಳಿಗೆ ಮಾಲಕರು ವಿವಿಧ ರೀತಿ ಉಡುಪು ತೊಡಿಸಿ, ಶೃಂಗರಿಸಿದ್ದು ಗಮನ ಸೆಳೆಯಿತು. ಅಲ್ಲದೆ, ಸ್ಮಾರ್ಟ್ ಪೆಟ್ ಸ್ಪರ್ಧೆ, ಪ್ಲೇ ಏರಿಯಾ, ಫೂಲ್ ಪಾರ್ಟಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಾಯಿಗಳಿಗೆ ವೈದ್ಯಕೀಯ ತಪಾಸಣಾ ಶಿಬಿರವೂ ಸ್ಥಳದಲ್ಲಿತ್ತು.
ಚೌಚೌ, ಪೊಮೇರಿಯನ್, ಗೋಲ್ಡನ್ ಡಾಗ್, ಪಿಟ್ ಬುಲ್, ರಾಟ್ವೈಲರ್, ಕಾಕರ್, ಡೋಬರ್‌ಮನ್, ಬೀಗಲ್ ಡಾಗ್, ಲ್ಯಾಬ್ರಡಾರ್, ಗ್ರೇಟ್ಡೇನ್, ಬರ್ನಾಲ್ಡ್ ಡಾಗ್, ಸಹಿತ ವಿವಿಧ ತಳಿಯ ಶ್ವಾನಗಳು ಪ್ರದರ್ಶನಕ್ಕಿತ್ತು. ಇನ್ನು ಈ ಸಂದರ್ಭದಲ್ಲಿ ಶ್ವಾನ ಪ್ರಿಯರು ಶ್ವಾನಗಳ ಜತೆ ಸೆಲ್ಫೀ ಕ್ಲಿಕಿಸಿ ಅವುಗಳೊಂದಿಗೆ ಆಟವಾಡಿ ಫುಲ್ ಎಂಜಾಯ್ ಮಾಡಿದರು.