Thursday, January 23, 2025
ಸುದ್ದಿ

ಮಂಗಳೂರು ಕಾಮಗಾರಿ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್ ಸಹಯೋಗದಲ್ಲಿ ಬೃಹತ್ ಕಾಲ್ನಡಿಗೆ ಸಮಾರೋಪ – ಕಹಳೆ ನ್ಯೂಸ್

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ತಲಪಾಡಿಯಿಂದ ಪಂಪ್‌ವೆಲ್ ತನಕ ಅಪೂರ್ಣ ಹೆದ್ದಾರಿ ಮತ್ತು ಮೇಲ್ಸೇತುವೆ ಕಾಮಗಾರಿಯ ಅವ್ಯವಸ್ಥೆಯನ್ನು ಖಂಡಿಸಿ ನಡೆದ ಬೃಹತ್ ಕಾಲ್ನಡಿಗೆಯ ಸಮಾರೋಪ ಪಂಪ್‌ವೆಲ್‌ನಲ್ಲಿ ಜರಗಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ದ.ಕ.ಜಿಲ್ಲೆಯ ಹೆದ್ದಾರಿ ಕಾಮಗಾರಿ ವಿಳಂಬ ವಿಚಾರದಲ್ಲಿ ಕಾಂಗ್ರೆಸ್ ಗುತ್ತಿಗೆದಾರರ ನೆರವು ಪಡೆದು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾಡಿದ ಆರೋಪ ಸಾಬಿತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ. ಇಲ್ಲದಿದ್ದರೆ ಅವರು ರಾಜಕೀಯ ನಿವೃತ್ತರಾಗಲು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಹೆದ್ದಾರಿ ಕಾಮಗಾರಿ ಮತ್ತು ಮೇಲ್ಸೇತುವೆ ಕೆಲಸ ನಡೆಸುವ ಗುತ್ತಿಗೆ ಕಾರ್ಮಿಕರಿಗೆ 10 ತಿಂಗಳಿಂದ ವೇತನ ಸಿಕ್ಕಿಲ್ಲ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಗೆ ದಶಮಾನೋತ್ಸವ ನಡೆಯುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವ ಯು.ಟಿ. ಖಾದರ್ ಮಾತನಾಡಿ, ಚುನಾವಣೆಯ ಅಧಿಕೃತ ದಿನಾಂಕಕ್ಕಾಗಿ ಕಾಯದೆ, ಈಗಲೇ ಚುನಾವಣೆ ಘೋಷ ಣೆಯಾಗಿದೆ ಎಂದು ಭಾವಿಸಿ ಕಾರ್ಯಕರ್ತರು ಕೇಂದ್ರ ಸರಕಾರದ ಜನವಿರೋಧಿ ನೀತಿ ಬಗ್ಗೆ ಪ್ರಚಾರ ಕಾರ್ಯ  ನಡೆಸಬೇಕು. ಮತದಾರರ ಪಟ್ಟಿಯನ್ನು ತತ್‌ಕ್ಷಣವೇ ಪರಿಶೀಲನೆ ನಡೆಸಿ ಮತದಾರರ ಹೆಸರು ಬಿಟ್ಟು ಹೋಗಿರುವ ಬಗ್ಗೆ ಖಾತರಿಪಡಿಸಿ ಸರಿಪಡಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ಮುಖಂಡ ಗಣೇಶ್, ವಿ.ಪ. ಸದಸ್ಯ ಹರೀಶ್ ಕುಮಾರ್ ಮಾತನಾಡಿದರು. ಮಮತಾ ಗಟ್ಟಿ, ವಿಶ್ವಾಸ್‌ದಾಸ್, ಶಾಲೆಟ್ ಪಿಂಟೋ, ಕಣಚೂರು ಮೋನು, ಧನಂಜಯ ಅಡ³ಂಗಾಯ, ಸಂತೋಷ್ ಕುಮಾರ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಕರೀಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಸಾಹುಲ್ ಹಮೀದ್, ಇಬ್ರಾಹಿಂ ಕೋಡಿಜಾಲ್, ಡಾ| ರಘು ಉಪಸ್ಥಿತರಿದ್ದರು.