Thursday, January 23, 2025
ರಾಜಕೀಯಸುದ್ದಿ

ಸಿದ್ದರಾಮಯ್ಯ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಗರಂ – ಕಹಳೆ ನ್ಯೂಸ್

ಸಿದ್ದರಾಮಯ್ಯ ಅವರಿಗೆ ಯಾರ ಮೇಲೂ ವಿಶ್ವಾಸವಿಲ್ಲ. ಮಹಿಳೆಯರ ಬಗ್ಗೆ ಗೌರವವೂ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ತೀವ್ರ ಹತಾಶರಾಗಿದ್ದಾರೆ. ಹೀಗಾಗಿ ಮೈಸೂರಿಗೆ ಹೋದಾಗೆಲ್ಲ ಸಿಟ್ಟು, ಜಗಳ ಮಾಡುತ್ತಾರೆ. ಜೊತೆಗೆ ಮತ್ತೊಮ್ಮೆ ಸಿಎಂ ಆಗುವ ಆಸೆಯಾಗಿದೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ತಮ್ಮ ಶಾಸಕರನ್ನು ಎತ್ತಿಕಟ್ಟುತ್ತಾ ಸಿಎಂ ಕುಮಾರಸ್ವಾಮಿ ಅವರ ಕಾಲೆಳೆಯುವ ಮೂಲಕ ರಾಜ್ಯ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಏಳು ತಿಂಗಳಿನಿಂದ ಸರ್ಕಾರ ತೆವಳುತ್ತಾ ಸಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಎಂ ಆಗುವ ಆಸೆಯಿಂದ ರಾಜ್ಯ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದು, ಬಿಜೆಪಿಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅಸಹಾಯಕತೆ ಹೊರಹಾಕಿ ಸಹಾನುಭೂತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಜಾರ್ಜ್ ಫರ್ನಾಂಡಿಸ್ ಕರಾವಳಿಯ ಹೆಮ್ಮೆಯ ಪುತ್ರ. ತುರ್ತುಪರಿಸ್ಥಿತಿ ಇದ್ದಾಗ ಜೈಲುವಾಸ ಅನುಭವಿಸಿದವರು. ಚೀನಾ-ಸಿಯಾಚಿನ್ ಯುದ್ಧಭೂಮಿಗೆ ಹೋದ ದಿಟ್ಟ ರಕ್ಷಣಾ ಸಚಿವ. ಅಪ್ರತಿಮ ದೇಶಭಕ್ತನನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದರು.