Friday, January 24, 2025
ಸುದ್ದಿ

ಸರ್ಕಾರವು ತಕ್ಷಣವೇ ಕಾನೂನನ್ನು ಮಾಡಿ ಶ್ರೀ ರಾಮ ಮಂದಿರವನ್ನು ನಿರ್ಮಿಸಬೇಕು: ಜನಾರ್ದನ ಗೌಡ – ಕಹಳೆ ನ್ಯೂಸ್

ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಪುತ್ತೂರಿನ ಮಿನಿವಿಧಾನ ಸೌಧದ ಮುಂಭಾಗ ಅಮರ್ ಜವಾನ್ ಜ್ಯೋತಿಯ ಬಳಿ‌ ರಾಷ್ಟ್ರೀಯ ಹಿಂದೂ ಆಂದೋಲನವು ನಡೆಯಿತು.

“ಅಯೋಧ್ಯಾ ನಗರವು ಕೋಟಿಗಟ್ಟಲೆ ಹಿಂದೂಗಳ ಶ್ರಧ್ದಾ ಸ್ಥಾನವಾಗಿದೆ ಮತ್ತು ಪ್ರಭು ಶ್ರೀರಾಮನ ಜನ್ಮಭೂಮಿಯಾಗಿದೆ ಎನ್ನುವುದು ಐತಿಹಾಸಿಕ ಸತ್ಯವಾಗಿದೆ.ಇದಕ್ಕೆ ಹಿಂದೂಗಳ ಧರ್ಮಗ್ರಂಥಗಳಲ್ಲಿ ಅನೇಕ ಪುರಾವೆಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಯಾಲಯದಲ್ಲಿ ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ ಇದು ಪುನಃ ಸಿದ್ಧವಾಗಿದೆ ಮತ್ತು 2010ರಲ್ಲಿ  ಅಲಹಾಬಾದ್ ಉಚ್ಚ ನ್ಯಾಯಾಲಯವು ‘ ಶ್ರೀರಾಮ ಜನ್ಮ ಭೂಮಿಯು ಪ್ರಭು ಶ್ರೀರಾಮನದೇ ಆಗಿದೆ’ ಎಂದು ಸ್ವೀಕೃತಿಯನ್ನು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂಗಳು  ಶ್ರೀರಾಮಮಂದಿರಕ್ಕಾಗಿ ಇನ್ನೆಷ್ಟು ಕಾಲ ಕಾಯಬೇಕು ? ವರ್ತಮಾನದಲ್ಲಿ ಪ್ರಭು ಶ್ರೀರಾಮನು ಇಲ್ಲಿ ಬಟ್ಟೆಯ ಡೇರೆಯಲ್ಲಿದ್ದಾನೆ ,ಇದೊಂದು ರೀತಿಯಲ್ಲಿ ಶ್ರೀರಾಮನ ಅನಾದವೇ ಆಗಿದೆ‌. ಈ ಸ್ಥಳದಲ್ಲಿ‌ ಶ್ರಧ್ದಾಳುಗಳು ಯಾವುದೇ ರೀತಿಯ ಪೂಜೆ – ಅರ್ಚನೆ ಮಾಡುವ ಹಾಗಿಲ್ಲ .ಹಿಂದೂ ಬಹುಸಂಖ್ಯಾತ ಭಾರತದಲ್ಲಿ‌ ಶ್ರೀರಾಮಜನ್ಮ ಭೂಮಿಯಲ್ಲಿ ಹಿಂದೂಗಳಿಗರ ಪೂಜೆಯನ್ನು ಮಾಡುವ ಅಧಿಕಾರವನ್ನು ನೀಡದಿರುವುದು ಲಜ್ಜಾಸ್ಪದವಾಗಿದೆ.

ಸಂಸತ್ತಿನಲ್ಲಿ ತಕ್ಷಣ ಕಾನೂನನ್ನು ಮಾಡಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣ ಮಾಡಬೇಕು.ಇಂದಿನ ಹಿಂದೂ ಯುವಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಭೋಗವಾದ, ವ್ಯಸನಾಧೀನತೆ ಮತ್ತು ನೀತಿಹೀನತೆಯಲ್ಲಿ ಸಿಲುಕಿದೆ.ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣವಾಗುತ್ತದೆ.

ವರ್ತಮಾನದಲ್ಲಿ ಅದು ಸಿಗುತ್ತಿಲ್ಲದಿರುವುದರಿಂದ  ಸಮಾಜದಲ್ಲಿ ಕಳ್ಳತನ ,ಹತ್ಯೆ ,ದರೋಡೆ,ಬಲತ್ಕಾರ ಮತ್ತು ಭ್ರಷ್ಟಾಚಾರಗಳಂತಹ ಅಪಾರಾಧಗಳು ಹೆಚ್ಚಾಗಿದೆ.ಆದುದರಿಂದ ಭಾವೀ ಪೀಳಿಗೆಗೆ ಜ್ಞಾನಿ,ಸಂಸ್ಕಾರಯುಕ್ತ ಮತ್ತು ಚಾರಿತ್ರ್ಯ  ಸಂಪನ್ನರನ್ನಾಗಿ ಮಾಡಲು ಅವರಿಗೆ ರಾಮಾಯಣ, ಮಹಾಭಾರತ, ಮುಂತಾದ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡುವುದು ಅತ್ಯಂತ ಅವಶ್ಯಕತೆವಿದೆ.

ಈ ಸಮಯದಲ್ಲಿ ಎಲ್ಲ ವಿದ್ಯಾಲಯ ‌- ಮಹಾವಿದ್ಯಾಲಯಗಳಲ್ಲಿ ಹಿಂದೂಗಳಿಗೆ ಪ್ರತಿದಿನ ಅವರ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡಬೇಕು ಹಾಗೆಯೇ ತೀರ್ಥಕ್ಷೇತ್ರಗಳಲ್ಲಿ ಮದ್ಯ – ಮಾಂಸಗಳ ಮಾರಾಟದ ಮೇಲೆ ನಿರ್ಬಂಧ ತರಬೇಕು ಮತ್ತು ಮಂದಿರಗಖ ಸರಕಾರೀಕರಣವನ್ನು ತೆಗೆದುಹಾಕಿ ಪುನಃ ಭಕ್ತರ ವಶಕ್ಕೆ ಒಪ್ಪಿಸಬೇಕು ಹಾಗೂ ಮಾರುತಿಯನ್ನು ಮುಸಲ್ಮಾನ, ಜಾಟ, ಚೀನಿ, ಕ್ರೀಡಾಪಟು ಮುಂತಾದ ಹೆಸರುಗಳಿಂದ ಸಂಬಂಧಿಸುವವರ ಮೇಲೆ ಕಠೋರ ಕಾರ್ಯಾಚರಣೆ ಮಾಡಬೇಕಯ.ಇದಕ್ಕಾಗಿ ಹಿಂದು ಧರ್ಮ,ಧರ್ಮ ಗ್ರಂಥ, ದೇವರು ಮತ್ತು ಸಂತರ
ಅನಾದರವನ್ನು ತಡೆಗಟ್ಟುವ ಕಠೋರ ಕಾನೂನನ್ನು ರಚಿಸಬೇಕು ” ಎಂದು ವಿಚಾರ ಮಂಡಿಸಿದರು.

ಆಂದೊಲನದ ವಿಷಯದ ಕುರಿತು ಸಹಾಯ ಕಮೀಷನರ್ ಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ನೀಡಲಾಯಿತು.ಆಂದೋಲನವನ್ನು ಶ್ರೀ. ದಯಾನಂದ ಇವರು ಶಂಖನಾದದೊಂದಿಗೆ ಪ್ರಾರಂಭ ಮಾಡಿದರು.

ಕು.ಚೇತನಾ ಮತ್ತು ಸೌ.ವಂದನಾ ನಿರೂಪಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸಾಂತಪ್ಪ ಗೌಡ, ಶ್ರೀ ಧರ್ಣಪ್ಪ, ಶ್ರೀ. ಚಂದ್ರಶೇಖರ,ಶ್ರೀ. ಪ್ರಶಾಂತ್ , ಶ್ರೀ. ಕೃಷ್ಣ ಕುಮಾರ್ ಶರ್ಮ ಮತ್ತು ಧರ್ಮ ಪ್ರೇಮಿಗಳಾದ ಶ್ರೀ. ಸೋಮನಾಥ, ಶ್ರೀ. ದಿವಾಕರ ಆಚಾರ್ಯ ಉಪಸ್ಥಿತರಿದ್ದರು .