Recent Posts

Sunday, January 19, 2025
ಸುದ್ದಿ

ಭಾರತೀಯ ಜನಶಕ್ತಿ ಕಾಂಗ್ರೆಸ್’ ನೂತನ ರಾಜಕೀಯ ಪಕ್ಷವನ್ನು ಉದ್ಘಾಟಿಸಿದ ಅನುಪಮಾ ಶೆಣೈ | ರಾಜ್ ಶೇಖರ್ ಮುಲಾಲಿ ಸಾಥ್.

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕುದ್ಲಿಗಿ ಡಿವೈಎಸ್ಪಿ ಆಗಿ ಕೆಲಸ ಮಾಡಿದ್ದ ಅನುಪಮಾ ಶೆಣೈ ರಾಜಕಾರಣಿಗಳೊಂದಿಗೆ ಘರ್ಷಣೆಯಿಂದಾಗಿ 18 ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದರು .ನಂತರದ ಬೆಳವಣಿಗೆಯಲ್ಲಿ ಕೆಲ ರಾಜಕಾರಣಿಗಳ ವಿರುದ್ಧ ನೇರ ಕಾನೂನು ಸಮರಕ್ಕೆ ಇಳಿದಿದ್ದರು .ಇದೀಗ ಅನುಪಮಾ ಶೆಣೈ ಅವರು ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ಇಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.

ಭಾರತೀಯ ನಕ್ಷೆ, ತ್ರಿವರ್ಣ ಧ್ವಜದ ಬಣ್ಣ ಬಳಸಿರುವ ಚಿತ್ರ ಪಕ್ಷದ ಚಿಹ್ನೆಯಾಗಿದ್ದು ಚಿಹ್ನೆ ಮತ್ತು ಹೆಸರು ಚುನಾವಣಾ ಆಯೋಗದಿಂದ ಇನ್ನಷ್ಟೇ ಅಧಿಕೃತಗೊಳ್ಳಬೇಕಾಗಿದೆ ಎಂದರು . ಜನರಿಗಾಗಿಯೇ ಈ ಪಕ್ಷ ಸ್ಥಾಪಿಸಿದ್ದೇನೆ ಎಂದ ಅನುಪಮಾ ಬ್ಯಾನರ್​ ಅನಾವರಣಗೊಳಿಸಿ ಪಕ್ಷಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಆರ್.ಟಿ.ಐ. ಕಾರ್ಯಕರ್ತ ರಾಜ್ ಶೇಖರ್ ಮುಲಾಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response