Sunday, November 24, 2024
ಸುದ್ದಿ

ರಾಜ್ಯಮಟ್ಟದ ಐಟಿ ಸ್ಪರ್ಧೆ ‘ಟೆಕ್ನೋ ತರಂಗ್-19’ ಸಮಾರೋಪ ಸಮಾರಂಭ – ಕಹಳೆ ನ್ಯೂಸ್

ಪುತ್ತೂರು: ಸ್ಪರ್ಧೆಯನ್ನು ಗೆಲ್ಲುವುದು ಅಥವಾ ಸೋಲುವುದಕ್ಕಿಂತ ಮುಖ್ಯವಾಗಿ ಭಾಗವಹಿಸುವಿಕೆ ಎನ್ನುವುದು ಪ್ರಮುಖವಾಗುತ್ತದೆ. ನಮ್ಮ ಬಾಗವಹಿಸುವಿಕೆಯಿಂದ ಸಿಗುವ ಅನುಭವ ಮುಂದಿನ ಹಂತದಲ್ಲಿ ಎದುರಾಗಬಹುದಾದ ಹೊಸ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಿದ್ಧಗೊಳಿಸುತ್ತದೆ. ಸೋಲು ಎಂದರೆ ಅಂತ್ಯವಲ್ಲ. ಅದು ಗೆಲುವಿನ ಒಂದು ಭಾಗ. ಸದಾ ಕಳೆದುಕೊಂಡವನು ಹೆಚ್ಚು ಕಲಿಯುತ್ತಾನೆ ಎಂದು ಸುಳ್ಯದ ಸಿ-ಕೆ ಆ್ಯಂಡ್ ಬುಟ್ಟಿಸ್ಟೋರ್ ಡಾಟ್ ಕಾಂ ಸಂಸ್ಥಾಪಕ, ಉದ್ಯಮಿ ಶ್ರೀಮುಖ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಗಣಕಶಾಸ್ತ್ರ ವಿಭಾಗ ಹಾಗೂ ಐಟಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ನೋ ತರಂಗ್-2019’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮೊಳಗಿನ ಹಿಂಜರಿಕೆ ಸಿಗುವ ಪ್ರತಿ ಅವಕಾಶವನ್ನು ನಿರಾಕರಿಸಿ ಮುಂದಿನದಕ್ಕಾಗಿ ಕಾಯುವಂತೆ ಮಾಡುತ್ತದೆ. ಆದರೆ ನಾವು ಅದನ್ನು ಮೀರಿ ಬೆಳೆಯದಿದ್ದರೆ ಅದು ನಮ್ಮ ಪ್ರತಿಭೆಯನ್ನೇ ನುಂಗಿಬಿಡುತ್ತದೆ. ನಮ್ಮನ್ನು ನಾವು ನಾಲ್ಕು ಜನರ ಮುಂದೆ ವ್ಯಕ್ತ ಪಡಿಸಿಕೊಳ್ಳದೇ ಹೋದಾಗ ನಮ್ಮ ವ್ಯಕ್ತಿತ್ವದ ವಿಕಾಸಕ್ಕೆ ಅವಕಾಶವೇ ಇಲ್ಲವಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ತಂತ್ರಜ್ಞಾನಗಳು ತುಂಬಾ ಮುಂದುವರೆದಿದೆ. ಇದರಿಂದ ನಮಗೆ ಕ್ಷಣ ಮಾತ್ರದಲ್ಲಿ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಇಂದು ಸಾಧ್ಯವಾಗುತ್ತಿದೆ. ಆದರೆ ವಿಷಾದವೆಂದರೆ ಈ ತಂತ್ರಜ್ಞಾನದ ದುರುಪಯೋಗ ಹೆಚ್ಚಾಗುತ್ತಿದೆ. ಅವುಗಳನ್ನು ಕಡಿಮೆ ಮಾಡುವಲ್ಲಿ ಇಂದಿನ ವಿದ್ಯಾರ್ಥಿಗಳು ಶ್ರಮವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ, ಹಿಂಜರಿಕೆ ಎನ್ನುವುದು ನಮ್ಮ ಗುರಿ ಸಾಧನೆಯ ಹಾದಿಯಲ್ಲಿ ಉಂಟಾಗುವ ಅತಿದೊಡ್ಡ ಶತ್ರು. ಮುನ್ನುಗ್ಗುವ ಛಲ ಹಾಗೂ ಧೈರ್ಯ ಅತೀ ಅವಶ್ಯಕ. ಏಕಾಗೃತೆ ಹಾಗೂ ಕಠಿಣ ಪರಿಶ್ರಮ ನಮ್ಮ ಗುರಿಯ ಹಾದಿಯನ್ನು ಸುಗಮಗೊಳಿಸುತ್ತದೆ. ಪ್ರಯತ್ನ ಪಡದೇ ಒಂದು ಕಾರ್ಯ ನಮ್ಮಿಂದ ಸಾಧ್ಯವೇ ಇಲ್ಲವೇ ಎಂದು ನಿರ್ಧರಿಸುವುದು ಮೂರ್ಖತನವೆನಿಸಿಕೊಳ್ಳುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್‌ಕುಮಾರ್, ಐಟಿ ಕ್ಲಬ್ ಸಂಯೋಜಕ ಗುರುಕಿರಣ್ ಹಾಗೂ ಶ್ವೇತಲಕ್ಷಿ್ಮ, ಐಟಿ ಕ್ಲಬ್ ವಿದ್ಯಾರ್ಥಿ ಅಧ್ಯಕ್ಷ ಶ್ರೀ ಅಭಿಜಿತ್ ಸಪಲ್ಯ ಉಪಸ್ಥಿತರಿದ್ದರು.

ಕಾಲೇಜಿನಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಿಕೆ ಶ್ರೀಮತಿ ಸುಚಿತ್ರಾ ಸ್ವಾಗತಿಸಿದರು. ಐಟಿ ಕ್ಲಬ್ ವಿದ್ಯಾರ್ಥಿಅಧ್ಯಕ್ಷರಾದ ಶ್ರೀ ಅಭಿಜಿತ್ ಸಪಲ್ಯ ವಂದಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿಗಳಾದ ನೀಮಾ ಹಾಗೂ ಜೊನಿಟಾ ಕಾರ್ಯಕ್ರಮವನ್ನು ನಿರೂಪಿಸಿದರು.

೨೦೧೯ರ ಸಾಲಿನ ಟೆಕ್ನೋತರಂಗ್ ಸಮಗ್ರ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನವಾಗಿ ಎಸ್‌ಡಿಎಂ. ಕಾಲೇಜು, ಉಜಿರೆ ಹಾಗೂ ದ್ವಿತೀಯ ಸ್ಥಾನವಾಗಿ ಸೈಂಟ್ ಆಗ್ನೆಸ್‌ಕಾಲೇಜು, ಮಂಗಳೂರು ಇವರುಗಳು ಪಡೆದಿರುತ್ತಾರೆ. ಟೆಕ್ನೋತರಂಗ್ ೧೯ – ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜುಗಳ ವಿವರ:

‘ಡಿಬೇಟ್’ನಲ್ಲಿ ಪ್ರಥಮ ಸೈಂಟ್ ಆಗ್ನೆಸ್ ಕಾಲೇಜು, ಮಂಗಳೂರು, ದ್ವಿತೀಯ ಶ್ರೀ ಭುವನೇಂದ್ರ ಕಾಲೇಜು, ‘ಆಡ್- ಮ್ಯಾಡ್ ಶೋ’ನಲ್ಲಿ ಪ್ರಥಮ ಎಸ್‌ಡಿಎಂ ಕಾಲೇಜು, ಉಜಿರೆ, ದ್ವಿತೀಯ ಸೈಂಟ್ ಅಲೋಷಿಯಸ್ ಕಾಲೇಜು, ಮಂಗಳೂರು, ‘ವೆಬ್‌ಡಿಸೈನ್’ ಸ್ಪರ್ಧೆಯಲ್ಲಿ ಎಸ್‌ಡಿಎಂ ಕಾಲೇಜು, ಉಜಿರೆ ಪ್ರಥಮ. ಶ್ರೀದೇವಿ ಕಾಲೇಜು ದ್ವಿತೀಯ, ‘ಕೋಡಿಂಗ್’ನಲ್ಲಿ ಸೈಂಟ್ ಅಲೋಷಿಯಸ್ ಕಾಲೇಜು, ಮಂಗಳೂರು ಪ್ರಥಮ, ಶ್ರೀದೇವಿ ಕಾಲೇಜು ದ್ವಿತೀಯ, ‘ಐಟಿ ಮೆನೇಜರ್ ‘ಸ್ಪರ್ಧೆಯಲ್ಲಿ ಸೈಂಟ್ ಆಗ್ನೆಸ್ ಕಾಲೇಜು, ಮಂಗಳೂರು ಪ್ರಥಮ, ಮಹಾತ್ಮಾ ಗಾಂದಿ ಮೆಮೋರಿಯಲ್ ಕಾಲೇಜು, ದ್ವಿತೀಯ, ‘ಗೇಮಿಂಗ್’ಸ್ಪರ್ಧೆಯಲ್ಲಿ ಗೋವಿಂದದಾಸ್ ಕಾಲೇಜು ಪ್ರಥಮ, ಸೈಂಟ್ ಫಿಲೋಮಿನ ಕಾಲೇಜು, ಪುತ್ತೂರು ದ್ವಿತೀಯ , ‘ಐಟಿ ಕ್ವಿಜ್’ನಲ್ಲಿ ಎಸ್ ಡಿ ಎಂ ಕಾಲೇಜು, ಮಂಗಳೂರು ಪ್ರಥಮ, ಕಣಚೂರ್ ಕಾಲೇಜು ದ್ವಿತೀಯ, ‘ಎಡಿಟಿಂಗ್’ನಲ್ಲಿ ಎಸ್‌ಡಿಎಂ ಕಾಲೇಜು ಉಜಿರೆ ಪ್ರಥಮ, ಭಂಡಾರ್‌ಕರ‍್ಸ್ ಕಾಲೇಜು ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

ಭಾಗವಹಿಸಿದ ಕಾಲೇಜುಗಳ ಪಟ್ಟಿ:
೧. ಎಸ್‌ಡಿಎಂಕಾಲೇಜ್‌ಅಫ್ ಬ್ಯುಸಿನೆಸ್ ಮೆನೇಜ್‌ಮೆಂಟ್ ಮಂಗಳೂರು
೨. ಎಸ್‌ಡಿಎಂಕಾಲೇಜ್, ಉಜಿರೆ
೩. ಸೈಂಟ್ ಅಲೋಷಿಯಸ್‌ಕಾಲೇಜ್, ಮಂಗಳೂರು
೪. ಇಸಿಆರ್ ಇನ್‌ಸ್ಟಿಟ್ಯೂಟ್ ಅಫ್ ಮೆನೇಜ್‌ಮೆಂಟ್ ಸ್ಟಡೀಸ್, ಕೋಟೇಶ್ವರ, ಕುಂದಾಪುರ
೫. ಡಾ. ಬಿ.ಬಿ. ಹೆಗ್ಡೆ ಫಸ್ಟ್ಗ್ರೇಡ್‌ಕಾಲೇಜ್,ಕುಂದಾಪುರ
೬. ಶ್ರೀ ಭುವನೇಂದ್ರಕಾಲೇಜ್, ಕಾರ್ಕಳ
೭. ಭಂಡಾರ್‌ಕರ‍್ಸ್ಆರ್ಟ್ಸಎಂಡ್ ಸೈನ್ಸ್ಕಾಲೇಜ್‌ಕುಂದಾಪುರ
೮. ಶ್ರೀ ಭಾರತಿಕಾಲೇಜ್, ಮಂಗಳೂರು
೯. ಸೈಂಟ್ ಫಿಲೊಮಿನಾಕಾಲೇಜ್, ಪುತ್ತೂರು
೧೦. ಸೇಕ್ರೆಡ್ ಹಾರ್ಟ್ಕಾಲೇಜ್, ಮಡಂತ್ಯಾರ್
೧೧. ಗರ‍್ನ್ಮೆಂಟ್ ಫಸ್ಟ್ಗ್ರೇಡ್‌ಕಾಲೇಜ್, ಬಲ್ಮಠ, ಮಂಗಳೂರು
೧೨. ಎಂಜಿಎಂ. ಡಿಗ್ರಿಕಾಲೇಜ್‌ಕುಶಾಲ್‌ನಗರ
೧೩. ಗರ‍್ನ್ಮೆಂಟ್ ಫಸ್ಟ್ಗ್ರೇಡ್‌ಕಾಲೇಜ್ , ಬೆಟ್ಟಂಪಾಡಿ
೧೪. ಸೈಂಟ್‌ಆನ್ಸ್ಡಿಗ್ರಿಕಾಲೇಜ್, ವಿರಾಜಪೇಟ್
೧೫. ಕೆನರಾಕಾಲೇಜ್ ಮಂಗಳೂರು
೧೬. ಗರ‍್ನ್ಮೆಂಟ್ ಫಸ್ಟ್ಗ್ರೇಡ್‌ಕಾಲೇಜ್, ಉಪ್ಪಿನಂಗಡಿ
೧೭. ಡಾ.ಎನ್‌ಎಸ್‌ಎಎಂ ಫಸ್ಟ್ಗ್ರೇಡ್‌ಕಾಲೇಜ್, ನಿಟ್ಟೆ
೧೮. ಕಣಚೂರ್ ಇನ್‌ಸ್ಟಿಟ್ಯೂಟ್ ಅಫ್ ಮೆನೇಜ್‌ಮೆಂಟ್‌ಎಂಡ್ ಸೈನ್ಸ್, ಮಂಗಳೂರು
೧೯. ಸೈಂಟ್‌ಆಗ್ನೆಸ್‌ಕಾಲೇಜು, (ಅಟೊನೊಮಸ್),ಮಂಗಳೂರು
೨೦. ಡಾ.ಪಿ. ದಯಾನಂದ ಪೈ, ಪಿ.ಸತೀಶ್ ಪೈ, ಗರ‍್ನ್ಮೆಂಟ್ ಫಸ್ಟ್ಗ್ರೇಡ್‌ಕಾಲೇಜ್‌ಕಾರ್ ಸ್ಟ್ರೀಟ್, ಮಂಗಳೂರು
೨೧. ಶ್ರೀದೇವಿ ಕಾಲೇಜ್, ಮಂಗಳೂರು
೨೨. ಶ್ರೀ ವೆಂಕಟರಮಣ ಸ್ವಾಮಿಕಾಲೇಜ್ ಬಂಟ್ವಾಳ
೨೩. ಗೋವಿಂದದಾಸ್‌ಕಾಲೇಜ್ ಸುರತ್ಕಲ್
೨೪. ಪನಾ ಕಾಲೇಜ್ ಮಂಗಳೂರು
೨೫. ಮಹಾತ್ಮಗಾಂಧಿ ಮೆಮೋರಿಯಲ್‌ಕಾಲೇಜುಉಡುಪಿ
೨೬. ಶ್ರೀ ರಾಮಕೃಷ್ಣಕಾಲೇಜು, ಮಂಗಳೂರು
೨೭. ವಿಜಯಾಕಾಲೇಜು, ಮುಲ್ಕಿ