Tuesday, January 21, 2025
ಸುದ್ದಿ

ಜೇಸಿಐ ಆಲಂಕಾರಿನ ನೂತನ ಪದಗ್ರಹಣ ಸಮಾರಂಭ – ಕಹಳೆ ನ್ಯೂಸ್

ಅಲಂಗಾರು: ಜೇಸಿಐ ಆಲಂಕಾರು ಇದರ ನೂತನ ಪದಗ್ರಹಣ ಸಮಾರಂಭ ಹಾಗೂ ದಶಮಾನೋತ್ಸವ ಸಮಾರಂಭ ಗ್ರಾಮ ಪಂಚಾಯತ್ ಸಭಾಂಗಣ ಆಲಂಕಾರಿನಲ್ಲಿ ನಡೆಯಿತು.

ಜೇಸಿಐ ಭಾರತ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಪಿಪಿಪಿ ಮುರಳಿ ಶ್ಯಾಮ್, ಕಡಬ ತಾಲೂಕು ಪತ್ರಕರ್ತರ ಸಂಘ ಇದರ ಅಧ್ಯಕ್ಷರಾದ ಶ್ರೀ ಕೆ ಎಸ್ ಬಾಲಕೃಷ್ಣ ,ಜೆಸಿಐ ವಲಯ 15ರ ಅಧ್ಯಕ್ಷ ಜೆ.ಎಫ್.ಪಿ ಅಶೋಕ್ ಚೂಂತಾರ್, ವಲಯ ಉಪಾಧ್ಯಕ್ಷ ಜೇಸಿ ದಾಮೋದರ ಪಾಟಾಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಅಧ್ಯಕ್ಷೆಯಾಗಿ ಜೇಸಿ ಹೇಮಲತಾ ಪ್ರದೀಪ್, ಕಾರ್ಯದರ್ಶಿಯಾಗಿ ಸತೀಶ್ ಜಿ ಆರ್, ಜೆಸಿರೆಟ್ ಅಧ್ಯಕ್ಷೆಯಾಗಿ ಮಮತಾ ಅಂಬರಾಜೆ ಜೂನಿಯರ್ ಜೇಸಿಐ ಅಧ್ಯಕ್ಷರಾಗಿ ಯೋಗೀಶ್ ಪರಾರಿ ಹಾಗೂ ಘಟಕಾಡಳಿತ ಮಂಡಳಿಯ ಸದಸ್ಯರಿಗೆ ಪದಪ್ರಧಾನ ಮಾಡಲಾಯಿತು ಈ ಸಂದರ್ಭದಲ್ಲಿ ಆಲಂಕಾರು ಘಟಕಕ್ಕೆ 13 ಹೊಸ ಸದಸ್ಯರು ಸೇರ್ಪಡೆಗೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ವಲಯ ಆಡಳಿತ ವಿಭಾಗದ ನಿರ್ದೇಶಕ ಪ್ರಶಾಂತ್ ಕುಮಾರ್ ರೈ ವಲಯ ತರಬೇತಿ ತರಬೇತಿ ವಿಭಾಗದ ಸಂಯೋಜಕ ಪ್ರದೀಪ ಬಾಕಿಲ ಉಪಸ್ಥಿತರಿದ್ದರು. ಜೇಸಿ ಪೂವಪ್ಪ ನಾಯ್ಕ ವೇದಿಕೆಗೆ ಆಹ್ವಾನಿಸಿದರು. ನಿಕಟ ಪೂರ್ವಾಧ್ಯಕ್ಷ ಹರಿಶ್ಚಂದ್ರ ಕೆ ಸ್ವಾಗತಿಸಿದರು. ಸಮಾರಂಭದಲ್ಲಿ ಘಟಕದ ದಶಮಾನೋತ್ಸವದ ಹೊಸ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಅಧ್ಯಕ್ಷರ ವಾರ್ತಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ನೂತನ ಕಾರ್ಯದರ್ಶಿ ಸತೀಶ್ ಜಿ.ಆರ್ ವಂದಿಸಿದರು.ಜೇಸಿಐ ಆಲಂಕಾರು: ರಾಷ್ಟ್ರೀಯ ಭಾವೈಕ್ಯತಾ ದಿನ: ಜೇಸಿಐ ಆಲಂಕಾರು ವತಿಯಿಂದ ಫೆಬ್ರವರಿ 2 ರಂದು ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಸಮಗ್ರತೆ ಹಾಗೂ ವಿಶ್ವಭ್ರಾತೃತ್ವವನ್ನು ಸಾರುವ ನಿಟ್ಟಿನಲ್ಲಿ ಸುಮಾರು 10,000ಕ್ಕೂ ಅಧಿಕ ವಿದ್ಯಾಥಿ೯ಗಳು ಹಾಗೂ ಯುವಜನತೆಗೆ ಭಾವೈಕ್ಯತೆ ಕುರಿತ ಪ್ರತಿಜ್ಞಾವಿಧಿ ಕಾಯ೯ಕ್ರಮವನ್ನು ವಿವಿಧೆಡೆ ಹಮ್ಮಿಕೊಳ್ಳಲಾಗುವುದು ಎಂದು ಜೇಸಿಐ ಆಲಂಕಾರು ಇದರ ಅಧ್ಯಕ್ಷೆ ಹೇಮಲತಾಪ್ರದೀಪ್ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.