Tuesday, January 21, 2025
ಸುದ್ದಿ

ಗ್ಯಾಸ್ ಮೇಲಿಟ್ಟಿದ್ದ ಕುಕ್ಕರ್ ಸಿಡಿದು ಬಾಲಕಿ ಗಂಭೀರ ಗಾಯ – ಕಹಳೆ ನ್ಯೂಸ್

ತರಕಾರಿ ಬೇಯಿಸಲು ಗ್ಯಾಸ್ ಮೇಲಿಟ್ಟಿದ್ದ ಕುಕ್ಕರ್ ಸಿಡಿದು ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ನೆಲ್ಯಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯೆ ಚೈತ್ರ ಅವರ ಪುತ್ರಿ ಆಜ್ಞಾ ಗಂಭೀರವಾಗಿ ಗಾಯಗೊಂಡ ಬಾಲಕಿ. ಕುಕ್ಕರ್ ನಲ್ಲಿ ತರಕಾರಿ ಬೇಯಿಸಲು ಗ್ಯಾಸ್ ಮೇಲಿಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಟ್ಟ ಬಾಲಕಿ ಗ್ಯಾಸ್ ಬಂದ್ ಮಾಡುತ್ತಿದ್ದಂತೆ ಕುಕ್ಕರ್ ಸಿಡಿದಿದೆ. ಕುಕ್ಕರ್ ಸಿಡಿತಕ್ಕೆ ಬಾಲಕಿಗೆ ಗಂಭೀರ ಗಾಯಗಳಾಗಿದೆ.ಕೂಡಲೇ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ದರದಲ್ಲಿ ಮನೆ ಮನೆಗೆ ಮಾರಾಟ ಮಾಡುವ ಕಳಪೆ ಗುಣಮಟ್ಟದ ಕುಕ್ಕರ್ ಇದಾಗಿದ್ದು, ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.