Monday, January 20, 2025
ಸುದ್ದಿ

ಹೃದಯಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ: 2002 ರಲ್ಲಿ ಹೃದಯಘಾತದಲ್ಲಿ ಮೃತಪಟ್ಟ ಮಂಗಳೂರು ಪೊಲೀಸ್ ನ 2000ನೇ ಇಸವಿ ಯ ಬ್ಯಾಚ್ ನ ದಿ.ಆನಂದ ರವರ ತಾಯಿ ಬೀತುರುರವರಿಗೆ 2000ನೇ ಇಸವಿಯ ಬ್ಯಾಚ್ ಸಿಬ್ಬಂದಿಯವರು ಒಟ್ಟು ಸೇರಿ ಸಂಗ್ರಹಿಸಿದ 50,000 ರೂಪಾಯಿ ನಗದನ್ನು ಉದಯ ರೈ ರವರು ಜ.30 ರಂದು ಅವರ ಮನೆಗೆ ಹೋಗಿ  ಹಸ್ತಾಂತರಿಸುತ್ತಾರೆ.

ಬೆಳ್ತಂಗಡಿ ತಾಲೂಕಿನ ಪದ್ಮುಂಜ ನಿವಾಸಿಯಾಗಿದ್ದ ಅನಂದರವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದರು. ವಿಧಿಯಾಟಕ್ಕೆ ಸೋತ ಅನಂದರವರು 2002 ರಲ್ಲಿ ಹಠಾತ್ತಾಗಿ ಎದೆ ನೋವು ಕಾಣಿಸಿಕೊಂಡು ಸುಬ್ರಹ್ಮಣ್ಯ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಘಾತದಿಂದ ಮರಣಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವಿವಾಹಿತ ಅನಂದ ಅವರು ತೀರ ಬಡಕುಂಟುಂಬದಲ್ಲಿ ಬೆಳೆದು ಬಂದವರು. ತಂದೆಯನ್ನು ಕಳೆದುಕೊಂಡ ಇವರಿಗೆ ಇಳಿ ವಯಸ್ಸಿನ ತಾಯಿ ಮನೆಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಕಷ್ಟವನ್ನು ಅರಿತ 2000 ಇಸವಿಯ ತರಬೇತಿಯ ಬ್ಯಾಚ್ ನ ಪೋಲೀಸರು ಅನಂದ ಅವರ ತಾಯಿಗೆ ನಗದು ಹಣವನ್ನು ನೀಡಿ ಔದಾರ್ಯ ಮೆರೆದಿದ್ದಾರೆ.

ಬಡ ಕುಟುಂಬ ಕ್ಕೆ ನೀಡಿದ ಸಹಾಯಕ್ಕೆ ತಂಡದ ಎಲ್ಲರಿಗೂ ಕೃತಜ್ಞತೆ ಯನ್ನು ಆನಂದರ ತಾಯಿ ಬೀತುರು ಸಲ್ಲಿಸಿದ್ದಾರೆ.
ಪೋಲೀಸರು ಸಮಾಜಮುಖಿಯಾಗಿ ಇನ್ನೋಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವುದು, ಪೋಲೀಸರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿದೆ.