Monday, January 20, 2025
ಕ್ರೀಡೆಸುದ್ದಿ

ನಾಲ್ಕನೇ ಏಕದಿನ ಪಂದ್ಯ: ಭಾರತಕ್ಕೆ ಹೀನಾಯ ಸೋಲು – ಕಹಳೆ ನ್ಯೂಸ್

ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಂಡಿದೆ. ನ್ಯೂಜಿಲ್ಯಾಂಡ್ 8 ವಿಕೆಟ್ ಗಳಿಂದ ಭಾರತವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಬೌಲರ್ ಗಳ ಅಬ್ಬರಕ್ಕೆ ಪೆವಿಲಿಯನ್ ಪರೇಡ್ ಮಾಡಿತು.

ಟೀಂ ಇಂಡಿಯಾವನ್ನು 92 ರನ್ ಗಳಿಗೆ ಕಟ್ಟಿಹಾಕುವಲ್ಲಿ ನ್ಯೂಜಿಲ್ಯಾಂಡ್ ಯಶಸ್ವಿಯಾಯ್ತು. ಗುರಿ ಬೆನ್ನು ಹತ್ತಿದ ನ್ಯೂಜಿಲ್ಯಾಂಡ್ 14.4 ಓವರ್ ಗಳಿಗೆ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಈಗಾಗಲೇ ಭಾರತದ ಕೈವಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ 5 ಏಕದಿನ ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರನೇ ಓವರ್ ಗೆ ಧವನ್ 13 ರನ್ ಗಳಿಸಿ ಮೊದಲು ವಿಕೆಟ್ ಒಪ್ಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತ್ರ ನಾಯಕ ರೋಹಿತ್ ಶರ್ಮಾ 7  ರನ್ ಗೆ ಔಟ್ ಆದ್ರು. ರಾಯಡು ಖಾತೆ ತೆರೆಯದೆ ಪೆವಿಲಿಯನ್ ಗೆ ತೆರಳಿದರು. ಕಾರ್ತಿಕ್ ಕೂಡ ಶೂನ್ಯ ಸುತ್ತಿದ್ರು. ಗಿಲ್ 9 ರನ್ ಗಳಿಸಿದ್ರೆ ಪಾಂಡ್ಯ 16 ರನ್ ಗಳಿಸಿದರು.