Recent Posts

Monday, April 7, 2025
ಸುದ್ದಿ

ನಾಳೆಯಿಂದ 2 ದಿನ ಕಡಬ ಕೇಪು ದೇವಾಲಯದಲ್ಲಿ ವಾರ್ಷಿಕ ಜಾತ್ರೋತ್ಸವ – ಕಹಳೆ ನ್ಯೂಸ್

ಕಡಬ: ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ದನ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಕೇಪು ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ ಫೆ 1 ಮತ್ತು 2 ರಂದು ನಡೆಯಲಿದೆ.

ಫೆ.೨ ಶುಕ್ರವಾರ ಬೆಳಿಗ್ಗೆ ಗಂಟೆ ೧೦:೦೦ ಕ್ಕೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಗಂಟೆ ೧೨:೦೦ ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ ೮:೦೦ ಕ್ಕೆ ಮಹಾಪೂಜೆ ,ಅನ್ನ ಸಂತರ್ಪಣೆ ರಾತ್ರಿ ಗಂಟೆ ೮:೩೦ ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ ವಸಂತ ಕಟ್ಟೆಯಲ್ಲಿ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. ೨ ಶನಿವಾರ ಬೆಳಿಗ್ಗೆ ಗಂಟೆ ೬:೦೦ ಕ್ಕೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಿಗ್ಗೆ ಗಂಟೆ ೯:೦೦ ಕ್ಕೆ ದೇವರ ಬಲಿ ಹೊರಟು ಉತ್ಸವ ,ದರ್ಶನ ಬಲಿ ಉತ್ಸವ ,ಬಟ್ಟಲು ಕಾಣಿಕೆ ಮಧ್ಯಾಹ್ನ ಗಂಟೆ ೧೨:೦೦ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ ,ನಾಗ ತಂಬಿಲ ,ದೈವಗಳಿಗೆ ತಂಬಿಲ ಸೇವೆ, ಪಂಚಮುಖಿ ಆಂಜನೇಯ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಲಿರುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ