Recent Posts

Monday, January 20, 2025
ಸುದ್ದಿ

ನಡೆದಿದ್ದು ನಡೆದುಹೋಯ್ತು, ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ: ಜಮೀರ್ ಅಹಮದ್ – ಕಹಳೆ ನ್ಯೂಸ್

ಬೆಂಗಳೂರು: ಶಾಸಕ ಕಂಪ್ಲಿ ಗಣೇಶ್‌ರಿಂದ ಹಲ್ಲೆಗೊಳಗಾಗಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ಸಚಿವ ಜಮೀರ್ ಅಹಮದ್ ಖಾನ್ ಆಗಮಿಸಿದ್ದರು.

ಈ ವೇಳೆ ಆನಂದ್‌ಸಿಂಗ್ ಜೊತೆ ಮಾತನಾಡಿರುವ ಅವರು, ನಡೆದಿದ್ದು ನಡೆದುಹೋಯ್ತು, ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ ಅಂತ ಹೇಳಲಾಗಿದೆ. ಪಕ್ಷದೊಳಗೆ ಗಣೇಶ್ ಮೇಲೆ ಕ್ರಮ ತೆಗೆದುಕೊಳ್ಳುವ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ಆನಂದ್ ಸಿಂಗ್ ಯಾವುದೇ ಉತ್ತರ ನೀಡಲಿಲ್ಲ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಆನಂದ್ ಸಿಂಗ್ ಗುಣಮುಖರಾಗಿದ್ದು ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಘಟನೆ ನಡೆದು 11 ದಿನ ಕಳೆದ್ರೂ ಪತ್ತೆಯಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಬೆನ್ನತ್ತಿರುವ ಬಿಡದಿ ಪೊಲೀಸರು ಗಣೇಶ್ ಅಡಗಿರುವ ಸ್ಥಳದ ಬಗ್ಗೆ ಮಾಹಿತಿ ಗೊತ್ತಿದ್ರೂ ಅರೆಸ್ಟ್ ಮಾಡಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಆರೋಪಿ ಪತ್ತೆಗಾಗಿ ಬಳ್ಳಾರಿ, ಮುಂಬೈಗೆ ಹೋಗಿದ್ದ ಪೊಲೀಸರು ಎರಡು ದಿನಗಳ ಹಿಂದೆ ವಾಪಸ್ ಬಂದಿದ್ದಾರೆ. ಆದ್ರೆ ಗಣೇಶ್ ಮಾತ್ರ ಸಿಕ್ಕಿಲ್ಲ.