Recent Posts

Sunday, January 19, 2025
ಸಿನಿಮಾಸುದ್ದಿ

ಗೋಲ್ಡನ್ ಸ್ಟಾರ್ ಗಣಿಯ ದೇವದಾಸ ರೂಪ – ಕಹಳೆ ನ್ಯೂಸ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್‌ರನ್ನಎಲ್ಲಾ ಸ್ಟೈಲ್‌ನಲ್ಲೂ ನೋಡಿರೋರಿಗೆ ಈಗ ಅವರ ಹೊಸ ಸ್ಟೈಲ್ ಪಕ್ಕಾ ಶಾಕ್ ಹೊಡೆಸುತ್ತ. ಗಣಿ ಭಗ್ನ ಪ್ರೇಮಿಯಾಗಿ ಆಲ್‌ಮೋಸ್ಟ್ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಆದರೆ, ಈ ರೇಂಜಿಗೆ ಗಡ್ಡ ಬಿಟ್ಟು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹಾಗಾದ್ರೆ ಇದು ಸಿನಿಮಾಕ್ಕಾ ರಿಯಲ್ ಲೈಫ್‌ನಲ್ಲಿ ಗಣಿಗೆ ಯಾರಾದ್ರೂ ಕೈ ಕೊಟ್ರಾ ಅನ್ನೋ ಡೌಟ್ ಬರೋದು ಕಾಮನ್. ಅಂದಹಾಗೆ ಗಣಿಯ ಈ ಲುಕ್‌ ಇರೋದು ಅವ್ರ ಮುಂದಿನ ಸಿನಿಮಾ 99 ನಲ್ಲಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳಿನ ಸೂಪರ್ ಹಿಟ್ ಸಿನಿಮಾ 96 ರ ರಿಮೇಕ್ ಆಗಿರೋ 99 ಚಿತ್ರದಲ್ಲಿ ಗಣೇಶ್ ಈ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೇತುಪತಿ ಹಾಗೂ ತ್ರಿಶಾ ಅಭಿನಯದ ಈ ಸಿನಿಮಾ ಕ್ಲಾಸಿಕಲ್ ಹಿಟ್ ಆಫ್ ದಿ ಇಯರ್ ಆಗಿತ್ತು. ಇದೇ ಸಿನಿಮಾ ಈಗ ಕನ್ನಡದಲ್ಲಿ ತಯಾರಾಗ್ತಾ ಇದ್ದು, ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಜೊತೆಗೆ ಜಾಕಿ ಭಾವನ ನಾಯಕಿಯಾಗಿ ನಟಿಸ್ತಾ ಇದ್ದಾರೆ.

ಗಣೇಶ್, ಪ್ರೀತಂ ಗುಬ್ಬಿ ಕಾಂಬಿನೇಷನ್ ಅನ್ನೋದು ಇನ್ನೊಂದು ಖುಷಿ. ಮತ್ತೊಮ್ಮೆ ಅಂದಹಾಗೆ ಗಣೇಶ್‌ರ ಫೇವರಿಟ್ ನಿರ್ದೇಶಕ ಪ್ರೀತಂ ಗುಬ್ಬಿ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾಕ್ಕೆ. ಕೋಟಿ ನಿರ್ಮಾಪಕ ರಾಮು ನಿರ್ಮಾಪಕರು. ಈ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದು, ಇದು ಅರ್ಜನ್ ಜನ್ಯಾ ಸಂಗೀತ ಸಂಯೋಜನೆಯ 100 ನೇ ಸಿನಿಮಾ.

ಸದ್ಯ ಗಣೇಶ್‌ರ ಈ ಲುಕ್ಕೇ ಸಾಕಷ್ಟು ಕ್ಯೂರ್ಯಾಸಿಟಿ ಕ್ರಿಯೇಟ್ ಮಾಡಿದ್ದು, ಸಿನಿಮಾದಲ್ಲಿ ಗಣೇಶ್ ಇಲ್ಲಿಯವರೆಗೂ ಕಾಣ ಸಿಗದ ಸೀರಿಯಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗಿದೆ.
ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್