Recent Posts

Monday, January 20, 2025
ಸುದ್ದಿ

ಫೆ.5 ರಂದು ಕಲ್ಲಡ್ಕ ವೇದವ್ಯಾಸ ಧ್ಯಾನ ಮಂದಿರದಲ್ಲಿ ವಿಶ್ವವ್ಯಾಪಿ ಭಾರತ ವಿಚಾರ ಸಂಕಿರಣ – ಕಹಳೆ ನ್ಯೂಸ್

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ರಾಜ್ಯಮಟ್ಟದ ಎಂಟನೇ ವರ್ಷದ ವಿಶ್ವವ್ಯಾಪಿ ಭಾರತ ಎಂಬ ವಿಷಯದ ವಿಚಾರ ಸಂಕಿರಣ ಫೆ.5 ರಂದು ಮಂಗಳವಾರ ವೇದವ್ಯಾಸ ಧ್ಯಾನ ಮಂದಿರದಲ್ಲಿ ಜರಗಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ! ಪ್ರಭಾಕರ ಭಟ್ ಹೇಳಿದರು. 

ಅವರು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿಂತಕ – ವಿದ್ವಾಂಸ ಶತಾವಧಾನಿ ಡಾ! ರಾ.ಗಣೇಶ್ ಅವರು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಭಾರತ ಸಂಸ್ಕೃತಿಯ ವೈಶ್ವಿಕತೆ ಎಂಬ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭಿಕ ವರ್ಷಗಳಲ್ಲಿ ರಾಷ್ಟ್ರ ರಾಷ್ಟ್ರೀಯತೆ ಎಂಬ ವಿಚಾರದಿಂದ ಆರಂಭಗೊಂಡ ಈ ವಿಚಾರ ಸಂಕಿರಣ ಈ ವರೆಗೆ ದೇಶದ ಸತ್ಯ ಚರಿತ್ರೆಯ ಬಗ್ಗೆ ರಾಜ್ಯ ಮಟ್ಟದ ವಿಚಾರಸಂಕಿರಣಗಳು ನಿರಂತರವಾಗಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಯೊಬ್ಬರು ತಲೆ ಎತ್ತಿ ಸ್ವಾಭಿಮಾನದ ಬದುಕು ಸಾಗಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ.

ನಾಲ್ಕು ಗುಂಪುಗಳಲ್ಲಿ ಅಗಮಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚರ್ಚೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ವಿದ್ಯಾ ಕೇಂದ್ರದ ಅವರಣದಲ್ಲಿ 6000 ಚ.ಅಡಿಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಸಕಲ ವ್ಯವಸ್ಥೆಯ ತಯಾರಿ ನಡೆಯುತ್ತಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯಗಳ 62 ಕ್ಕೂ ಅಧಿಕ ಕಾಲೇಜು ಗಳ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೊಂದಣಿ ಮಾಡಿಸಿದ್ದು , ಅಗಮಿಸುವ ಅವರಿಗೆ ವಸತಿ, ಉಟೋಪಚಾರದ ವ್ಯವಸ್ಥೆ ಗಳನ್ನು ಕಲ್ಲಿಸಿಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತಮಾದವ, ಸಹಸಂಚಾಲಕ ರಮೇಶ್ ಎನ್. ಪ್ರಾಂಶುಪಾಲ ಕ್ರಷ್ಣಪ್ರಸಾದ್ ಉಪಸ್ಥಿತರಿದ್ದರು.