Monday, January 20, 2025
ಸುದ್ದಿ

ಮಂಗನ ಕಾಯಿಲೆ ಭೀತಿ: ಬೆಳ್ತಂಗಡಿಯಲ್ಲಿ ಮತ್ತೊಂದು ಮಂಗನ ಶವ ಪತ್ತೆ – ಕಹಳೆ ನ್ಯೂಸ್

ಬೆಳ್ತಂಗಡಿ: ಮಂಗನ ಕಾಯಿಲೆಯ ಭೀತಿ ನಡುವೆ ಬದುಕುತ್ತಿರುವ ಕರಾವಳಿ ಜನತೆಯನ್ನ ಇನ್ನಷ್ಟು ಬೆಚ್ಚಿ ಬೀಳಿಸುವ ಸುದ್ದಿಯೊಂದು ನಡೆದಿದೆ, ಹೌದು ಬೆಳ್ತಂಗಡಿಯ ನಾರಾವಿ ದೇವಸ್ಥಾನದ ಸಮೀಪದ ನಾಗಬನದ ಬಳಿ ಗುರುವಾರ ಮಂಗನ ಶವವೊಂದು ಪತ್ತೆಯಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದು, ಅಧಿಕಾರಿಗಳು ಅದರ ಸ್ಯಾಂಪಲ್ ಸಂಗ್ರಹಿಸಿ ಶವ ಸುಟ್ಟು ಹಾಕಿದ್ದಾರೆ. ಸಂಗ್ರಹಿಸಿದ ಸ್ಯಾಂಪಲ್ ಅನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮಂಗ ಜ.30 ರ ಸುಮಾರಿಗೆ ಸತ್ತಿರುವ ಸಾಧ್ಯತೆ ಇದ್ದು, ವಿಷ ಸೇವನೆ ಕಾರಣವಾಗಿರಬಹುದು ಎಂದು ಪಶುಚಿಕಿತ್ಸಾಲಯದ ವೈದ್ಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಸ್ವತಂತ್ರ ರಾವ್ ಸೇರಿದಂತೆ ಇತರರು, ಕೆ.ಎಫ್.ಡಿ ಅಧಿಕಾರಿ, ಪಶು ವೈದ್ಯಾಧಿಕಾರಿಗಳು, ಅರಣ್ಯ ಇಲಾಖೆಯವರು, ಗ್ರಾ.ಪಂನ ತಂಡ ಭೇಟಿ ನೀಡಿದೆ.

ಈ ಹಿಂದೆ ತಾಲೂಕಿನ ಇತರ 4 ಸ್ಥಳಗಳಲ್ಲಿ ಕಂಡುಬಂದ ಮಂಗಗಳ ಮೃತದೇಹದ ಸ್ಥಳದಲ್ಲಿ ಪತ್ತೆಯಾದ ಉಣ್ಣಿಗಳ ಪರೀಕ್ಷಾ ವರದಿಯಲ್ಲಿ ಖಾಯಿಲೆಯ ಯಾವುದೇ ಅಂಶ ಇಲ್ಲ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.