Monday, January 20, 2025
ಸುದ್ದಿ

ಭೂಗತ ಪಾತಕಿ ರವಿ ಪೂಜಾರಿ ಅಂದರ್ – ಕಹಳೆ ನ್ಯೂಸ್

ಭೂಗತ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದಾರೆ .ಅರವತ್ತಕ್ಕೂ ಹೆಚ್ಚು ಪ್ರಕರಣಗಳು ಆತನ ವಿರುದ್ಧ ಇವೆ. ರವಿ ಪೂಜಾರಿ ವಿರುದ್ಧ ಕೇಂದ್ರ ಸರಕಾರ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು.

ಹಫ್ತಾ ವಸೂಲಿ ಅವನ ಮುಖ್ಯ ದಂಧೆಯಾಗಿತ್ತು.ವಿದೇಶದಲ್ಲಿ ಇದ್ದುಕೊಂಡು, ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸ್ತಾ ಇದ್ದ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಇವನ ವಿರುದ್ಧ ದೂರು ದಾಖಲಾಗಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿ ಮೂಲದ ರವಿಪೂಜಾರಿ ದುಬೈ, ಕಳೆದ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳಲ್ಲಿ ಓಡಾಡುತ್ತಾ ತನ್ನ ದಂಧೆ ಮಾಡಿಕೊಂಡಿದ್ದ. ಇದೀಗ ಈತನನ್ನ ಆಫ್ರಿಕಾದ ಸೆನೆಗಲ್ ಪೊಲೀಸರು ಬಂಧಿಸಿದ್ದಾರೆ.