Monday, January 20, 2025
ಸುದ್ದಿ

ಕಿಲ್ಲರ್ ಸೈನೆಡ್ ಮೋಹನ್‌ಗೆ ಜೀವಾವಧಿ ಶಿಕ್ಷೆ – ಕಹಳೆ ನ್ಯೂಸ್

ಯುವತಿಯರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡುತ್ತಿದ್ದ ಆರೋಪಿ ಸೈನೆಡ್ ಮೋಹನ್ ಕುಮಾರ್‌ಗೆ ಮಿತ್ತೂರಿನ ಯುವತಿಯೋರ್ವಳನ್ನು ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.

ಪುತ್ತೂರಿನ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ನರ್ಸ್ ಆಗಿದ್ದ ಮಿತ್ತೂರಿನ 31 ವಯಸ್ಸಿನ ಯುವತಿಯೋರ್ವಳನ್ನು ವಿಟ್ಲ ಬಸ್ ಸ್ಟ್ಯಾಂಡ್‌ನಲ್ಲಿ ಪರಿಚಯ ಮಾಡಿಕೊಂಡ ಸೈನೆಡ್ ಮೋಹನ್ ತನ್ನ ಹೆಸರನ್ನು ಸುಧಾಕರ ಗೌಡ ಎಂದು ಬದಲಾಯಿಸಿದ್ದ .

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ವಿವಾಹವಾಗುವುದಾಗಿ ನಂಬಿಸಿ, ಮೈಸೂರಿನ ಲಾಡ್ಜ್ನಲ್ಲಿ ಇಬ್ಬರು ತಂಗಿದ್ದು. ಮರುದಿನ ತನಗೆ ಕೆಲಸವೊಂದಕ್ಕೆ ಸಂದರ್ಶನಕ್ಕಾಗಿ ತೆರಳಲಿರುವುದಾಗಿ ಆಕೆಯಲ್ಲಿ ಹೇಳಿ ಚಿನ್ನಾಭರಣವನ್ನು ತೆಗೆದಿರಿಸಿದ್ದ. ಬಳಿಕ ಆಕೆಗೆ ಗರ್ಭಿಣಿಯಾಗದಂತೆ ತಡೆಯಲು ಮಾತ್ರೆ ಎಂದು ಹೇಳಿ ಮಾತ್ರೆ ನೀಡಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸೈನೈಡ್ ಲೇಪಿತವಾದ ಆ ಮಾತ್ರೆಯನ್ನು ಸೇವಿಸಿದ್ದ ಯುವತಿ ಶೌಚಗೃಹದಲ್ಲಿ ಮೃತಪಟ್ಟಿದ್ದಳು. ಬಳಿಕ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ ಮೋಹನ್ ಕುಮಾರ್, ಆಕೆಯ ಹೆತ್ತವರಿಗೆ ದೂರವಾಣಿ ಕರೆ ಮಾಡಿ ‘ನಾನು ನಿಮ್ಮ ಮಗಳನ್ನು ವಿವಾಹವಾಗಿದ್ದು, ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ತಿಳಿಸಿದ್ದ. ಇದರಿಂದಾಗಿ ಆಕೆ ನಾಪತ್ತೆಯಾದರೂ ಮನೆ ಮಂದಿ ದೂರು ನೀಡಿರಲಿಲ್ಲ.