Sunday, November 24, 2024
ಸುದ್ದಿ

ಭಾರತೀಯ ನೌಕಾ ಸೇನೆಯನ್ನು ಬಲಪಡಿಸಲು 6 ಅತ್ಯಾಧುನಿಕ ಸಬ್​​ಮೆರಿನ್ ನಿರ್ಮಾಣ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ನೌಕಾ ಸೇನೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 6 ಅತ್ಯಾಧುನಿಕ ಸಬ್​​ಮೆರಿನ್ ನಿರ್ಮಾಣ ಹಾಗೂ ಫ್ರಾನ್ಸ್ ನಿಂದ 2ಟಿ ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ. ಸ್ವದೇಶಿ ಸಬ್ ಮೆರಿನ್ ನಿರ್ಮಾಣಕ್ಕಾಗಿ Defence Acquisition Council (DAC) 40000 ಕೋಟಿ ರೂ. ಅನುದಾನ ನೀಡಲು ಮುಂದಾಗಿದೆ.

ಕಳೆದ ಆಗಸ್ಟ್​ ತಿಂಗಳಲ್ಲಿ 111 ನೌಕಾ ಹೆಲಿಕಾಪ್ಟರ್​ ನಿರ್ಮಾಣಕ್ಕೆ 21,738 ಕೋಟಿ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ​ಒಪ್ಪಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಫ್ರೆಂಚ್ ​ನಿರ್ಮಿತ ಚೇತಕ್ ಹೆಲಿಕಾಪ್ಟರ್ ​ಬದಲಿಗೆ ಹೊಸ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಜೆಕ್ಟ್​​-751 ಹೆಸರಿನಲ್ಲಿ ಆರು ಅತ್ಯಾಧುನಿಕ ಸಬ್​ಮೆರಿನ್ ನಿರ್ಮಾಣವಾಗಲಿದೆ. ನೂತನ ಸಬ್​​ಮೆರಿನ್​ ನೌಕಾಸೇನೆಗೆ ಸಾಕಷ್ಟು ಉತ್ತೇಜನ ನೀಡಲಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೌಕಾಸೇನೆಗೆ ಉಪಯುಕ್ತವಾಗುವ ಹೆಲಿಕಾಪ್ಟರ್ ಯೋಜನೆಗೆ 21,738 ಕೋಟಿ ರು ವೆಚ್ಚವಾಗಲಿದೆ. ಇನ್ನು ಸಬ್ ಮೆರಿನ್ ನಿರ್ಮಾಣಕ್ಕೆ ನೆರವು ನೀಡಲು ರಷ್ಯಾ, ಫ್ರಾನ್ಸ್, ಜರ್ಮನಿ, ಸ್ವೀಡನ್ ನ ಹಡಗು ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.