ನವದೆಹಲಿ: ಸಂಘಟಿತ ವಲಯದ ಕಾರ್ಮಿಕರು 60 ವರ್ಷ ದಾಟಿದ ನಂತರ ಮಾಸಿಕ ಮೂರು ಸಾವಿರ ಪಿಂಚಣಿ ಪಡೆಯಲಿದ್ದಾರೆ ಎಂದು ಕೇಂದ್ರ ರಾಜ್ಯ ಹಣಕಾಸು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಸಂಸತ್‍ನಲ್ಲಿ ಬಜೆಟ್ ಮಂಡಿಸಿದ ಅವರು, ಪ್ರಧಾನ್ ಶ್ರಮಯೋಗಿ ಮಂದಾರ್ ಯೋಜನೆಯನ್ನು ಘೋಷಿಸಿದ್ದಾರೆ. 15ಸಾವಿರ ಮಾಸಿಕ ವೇತನ ಪಡೆಯುವ ಅಸಂಘಟಿತ ಕಾರ್ಮಿಕರು ನಿವೃತ್ತಿಯ ಬಳಿಕ ಮಾಸಿಕ ಮೂರು ಸಾವಿರ ಪಿಂಚಣಿ ಪಡೆಯುವ ಈ ಯೋಜನೆಯನ್ನು ಇದೇ ಮೊದಲ ಬಾರಿಗೆ ಘೋಷಿಸಲಾಗಿದೆ.
ಇದರಿಂದಾಗಿ ಸಣ್ಣ ಆದಾಯ ಹೊಂದಿರುವ ಕಾರ್ಮಿಕರು ನಿವೃತ್ತಿಯ ನಂತರ ಸ್ವಲ್ಪ ನಿರಾಳವಾಗುವ ಅವಕಾಶವಿದೆ. ಭವಿಷ್ಯ ನಿಧಿ (ಇಪಿಎಫ್‍ಒ)ಯಡಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಎರಡೂವರೆ ಲಕ್ಷ ಪರಿಹಾರ ಧನವನ್ನು ಆರೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಕಾರ್ಮಿಕರು ಮತ್ತು ಕೆಲಸಗಾರರಿಗೆ ನೀಡುತ್ತಿದ್ದ ಗ್ರ್ಯಾಜುಟಿ ಹಣವನ್ನು 10ಲಕ್ಷದಿಂದ 30ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.4ರಷ್ಟು ಹಣವನ್ನು ಭರಿಸಲಿದೆ.
ಗ್ರ್ಯಾಜುಟಿ ಪಿಂಚಣಿ ಮೊತ್ತವನ್ನು 3500ರಿಂದ 7 ಸಾವಿರ ರೂ.ವರೆಗೆ ಹೆಚ್ಚಿಸಲಾಗಿದೆ. ಗ್ರ್ಯಾಜುಟಿ ಪಾವತಿ ಮಿತಿಯನ್ನು 10ರಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.