Sunday, November 24, 2024
ಸುದ್ದಿ

ಗುಜರಾತಿನಲ್ಲೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ | ಕಲಾವಿದ ಸ್ನೇಹಿ ಸಂಘಟನೆಯ ಅದ್ದೂರಿ ಉದ್ಘಾಟನೆ.

ಬರೋಡಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಗುಜರಾತ್ ಘಟಕವನ್ನು ಅದ್ದೂರಿಯಿಂದ ಉದ್ಘಾಟಿಸಲಾಯಿತು.

ಗುಜರಾತ್‌ನಲ್ಲಿ ಸೂರತ್, ಅಂಕಲೇಶ್ವರ, ಬರೋಡ, ಅಹಮದಾಬಾದ್ ಕೇಂದ್ರಗಳನ್ನು ರಚಿಸಲಾಗಿದೆ. ಪ್ರತೀವರ್ಷ ಒಂದೊಂದು ಕೇಂದ್ರದಲ್ಲಿ ವಾರ್ಷಿಕೋತ್ಸವವನ್ನು ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. 2018 ನವೆಂಬರ್ 10 ರಂದು ಅಂಕಲೇಶ್ವರರದಲ್ಲಿ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಾಶ್ರಯ ಯೋಜನೆಗೆ ಮೂರು ಮನೆಗಳ ಕೊಡಗೆಯನ್ನು ನೀಡಲಾಯಿತು.
ಅಂಕಲೇಶ್ವರ ಕೇಂದ್ರದಿಂದ ಪ್ರಥಮ ಮನೆಯ ಕೊಡುಗೆಯಾಗಿ 5,11,000 ರೂಪಾಯಿ, ಉದ್ಯಮಿ ಪ್ರಮೀಳಾ ಮತ್ತು ಶಶಿಧರ ಶೆಟ್ಟಿಯರು ದ್ವಿತೀಯ ಮನೆಯ ಕೊಡುಗೆಯಾಗಿ 5,00,000 ರೂಪಾಯಿಗಳನ್ನು ನೀಡಿದರು. ಸೂರತ್ ಮತ್ತು ಬರೋಡಾ ಅಭಿಮಾನಿಗಳಿಂದ ತೃತೀಯ ಮನೆಯ ಕೊಡುಗೆಯಾಗಿ 5,00,000ರೂ. ಗಳನ್ನು ಸಂಸ್ಥೆಗೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಾಡಿ ಶ್ರೀ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಉದ್ಘಾಟಿಸಿದರು. ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ರಾಧಾಕೃಷ್ಣ ಶೆಟ್ಟಿ, ರಾಮಚಂದ್ರ ವಿ. ಶೆಟ್ಟಿ, ಅಪ್ಪು ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ, ಮನೋಜ್ ಪೂಜಾರಿ, ಸುಮನ್‌ಲಾಲ್ ಕೊಡಿಯಾಲ್‌ಬೈಲ್. ಮನೋಜ್ ಮೋಹನ್ ಪೂಜಾರಿ, ಶರ್ಮಿಳಾ ಎಂ. ಜೈನ್ ಉಸ್ಥಿತರಿದ್ದರು.
ಗುಜರಾತ್ ಘಟಕದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು , ಬರೋಡಾ ತುಳು ಕೂಟದ ವತಿಯಿಂದ ರಾಧಾಕೃಷ್ಣ ನಾವುಡ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸೀತಾರಾಮ ಕುಮಾರ್ ಕಟೀಲು, ಪದ್ಮನಾಭ ಉಪಾಧ್ಯಾಯ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಖ್ಯಾತ ಕಲಾವಿದರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಅಶ್ವಿತ್ ಶೆಟ್ಟಿ ತುಳುನಾಡು

Leave a Response