ಪ್ರತಿಪಕ್ಷಗಳು ರೈತರಿಗಾಗಿ ಮೊಸಳೆ ಕಣ್ಣೀರು ಹಾಕೋದನ್ನ ಮೊದಲು ನಿಲ್ಲಿಸಬೇಕು: ಜೇಟ್ಲಿ ಕಿಡಿ – ಕಹಳೆ ನ್ಯೂಸ್
ರೈತರಿಗೆ ವಾರ್ಷಿಕ 6,000 ನೀಡುವ ಕೇಂದ್ರದ ನಿರ್ಧಾರ ಹೆಚ್ಚುವರಿ ಬೆಂಬಲವಷ್ಟೇ. ಪ್ರತಿಪಕ್ಷಗಳು ರೈತರಿಗಾಗಿ ಮೊಸಳೆ ಕಣ್ಣೀರು ಹಾಕೋದನ್ನ ಮೊದಲು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.
ಅನಾರೋಗ್ಯದಿಂದಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಜೇಟ್ಲಿ, ANI ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಇದೇ ಮೊದಲ ಬಾರಿಗೆ ಕೃಷಿಗಾಗಿ 75,000 ಕೋಟಿ ರೂ.ಗಳಷ್ಟು ಬೃಹತ್ ಅನುದಾನ ವಿನಿಯೋಗಿಸಿದ್ದೇವೆ.
ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಿಸಲಿದ್ದೇವೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಮಾತ್ರವಲ್ಲ, ರಾಜ್ಯ ಸರ್ಕಾರಗಳೂ ಧಾವಿಸಬೇಕು. ಪ್ರತಿಪಕ್ಷಗಳು ಸಹ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. ಅವರೂ ಇಂತಹ ಯೋಗ್ಯ ಯೋಜನೆಗಳನ್ನು ಘೋಷಿಸಿದಲ್ಲಿ ಕೇಂದ್ರ ಸರ್ಕಾರ ಖಂಡಿತ ಪರಿಗಣಿಸುತ್ತದೆ ಎಂದರು.