ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿಯಲ್ಲಿ 3 ಚಿನ್ನದ ಕಿರೀಟಗಳನ್ನು ಕಳವು ಮಾಡಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಗೋವಿಂದರಾಜ ಸ್ವಾಮಿ ದೇಗುಲದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
3 ಚಿನ್ನದ ಕಿರೀಟಗಳನ್ನು ಕಳವು ಮಾಡಲಾಗಿದ್ದು, ತಡರಾತ್ರಿ ತಿರುಪತಿ ಈಸ್ಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗೋವಿಂದರಾಜಸ್ವಾಮಿ, ಶ್ರೀದೇವಿ ಮತ್ತು ಭೂದೇವಿಗೆ ಉತ್ಸವದಲ್ಲಿ ಹಾಕಲಾಗುವ 1,350 ಗ್ರಾಂ ತೂಕದ ಚಿನ್ನದ ಕಿರೀಟಗಳನ್ನು ಕಳವು ಮಾಡಲಾಗಿದೆ. ಗೋವಿಂದರಾಜ ದೇಗುಲದಲ್ಲಿ ಹೈ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಸೇರಿದಂತೆ ಬಿಗಿ ಭದ್ರತೆ ಇದೆ. ಹೀಗಿದ್ದರೂ ಕೂಡ 3 ಚಿನ್ನದ ಕಿರೀಟಗಳನ್ನು ದೋಚಿರುವುದು ಅಚ್ಚರಿಗೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆಯಾಗಿರುವ ಕಿರೀಟಗಳ ಶೋಧ ಕಾರ್ಯ ಕೈಗೊಂಡಿದ್ದಾರೆ.