Recent Posts

Sunday, January 19, 2025
ರಾಜಕೀಯಸುದ್ದಿ

ನಾನು ಮುಖ್ಯ ಮಂತ್ರಿ ಆಗಬಾರದಾ? ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ..! – ಕಹಳೆ ನ್ಯೂಸ್

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನವನ್ನು ಅಲಂಕರಿಸುವುದಕ್ಕೆ ದೊಡ್ಡ ದಂಡೇ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇರುವುದು ತಿಳಿದಿದೆ. ಈ ನಡುವೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಕೂಡ ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಈ ಭಾಗದವ್ರು ಸಿಎಂ ಆಗಬೇಕು ಅನ್ನುವುದು ನಮ್ಮ ಭಾಗದ ಜನರಿಗೆ ಬಹಳ ದಿನಗಳಿಂದ ಆಸೆ ಇದೆ. ತಕ್ಷಣವೇ ಸಿಎಂ ಆಗಲು ಆಗೋದಿಲ್ಲಾ. ಅದಕ್ಕೆ ಕಾಲಾವಕಾಶ ಬೇಕು. ಪಕ್ಷ, ಸಂದರ್ಭ, ಸನ್ನಿವೇಶದ ಮೇಲೆ ಅದು ನಿರ್ಧಾರವಾಗುತ್ತೆ. ಕಾದು ನೋಡೊಣ ಅಂತ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು