Friday, September 20, 2024
ಸುದ್ದಿ

ತೊಕ್ಕೊಟ್ಟು ಯುನಿಟಿ ಹಾಲ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲು – ಕಹಳೆ ನ್ಯೂಸ್

ಮಂಗಳೂರು: ಮದುವೆ ಹಾಗೂ ಇನ್ನಿತರ ಖಾಸಗಿ ಸಮಾರಂಭ ನಡೆಯುವ ಹಾಲ್‍ಗಳ ಪಕ್ಕದ ರಸ್ತೆ ಬದಿ ವಾಹನ ನಿಲುಗಡೆ ಮಾಡಿದರೆ ಸಂಬಂಧ ಪಟ್ಟ ಹಾಲ್ ಗಳ ಮಾಲಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ತಿಳಿಸಿದ್ದಾರೆ.

ಕಳೆದ ಬುಧವಾರ ತೊಕ್ಕೊಟ್ಟು ಸಮೀಪ ಕಲ್ಲಾಪುವಿನಲ್ಲಿ ಯೂನಿಟಿ ಹಾಲ್ ಮತ್ತು ಅದರ ಪಕ್ಕದ ಆವರಣದಲ್ಲಿ ಏರ್ಪಡಿಸಿದ್ದ ಮದುವೆ ಸಂದರ್ಭ ಅಧಿಕ ಸಂಖ್ಯೆಯಲ್ಲಿ ವಾಹನಗಳನ್ನು ರಸ್ತೆ ಬದಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಪಾರ್ಕ್ ಮಾಡಿದ್ದರಿಂದ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಮಧ್ಯರಾತ್ರಿಯವರೆಗೂ ತೊಂದರೆ ಅನುಭವಿಸಿದ್ದರು. ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 283 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಲಾಗಿದೆ. ಟ್ರೇಡ್ ಲೈಸನ್ಸ್ ರದ್ಧತಿಗಾಗಿ ಉಳ್ಳಾಲ ಪುರಸಭೆಗೆ ಪತ್ರ ಬರೆದು ಶಿಫಾರಸು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು