Recent Posts

Sunday, January 19, 2025
ಸುದ್ದಿ

ಸರಕಾರವು ತಕ್ಷಣ ಕಾನೂನನ್ನು ಮಾಡಿ ಶ್ರೀರಾಮಮಂದಿರವನ್ನು ನಿರ್ಮಿಸಬೇಕು; ಉಪೇಂದ್ರ ಆಚಾರ್ಯ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯಾನಗರವು ಕೋಟಿಗಟ್ಟಲೆ ಹಿಂದುಗಳ ಶ್ರದ್ಧಾಸ್ಥಾನವಾಗಿದೆ ಮತ್ತು ಪ್ರಭು ಶ್ರೀರಾಮನ ಜನ್ಮಭೂಮಿಯಾಗಿದೆಯೆನ್ನುವುದು ಐತಿಹಾಸಿಕ ಸತ್ಯವಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ, ಇವೆರಡೂ ಸ್ಥಳಗಳಲ್ಲಿ ಭಾಜಪದ್ದೇ ಬಹುಮತ ಸರಕಾರವಿದೆ. ಆದುದರಿಂದ ಸಂಸತ್ತಿನಲ್ಲಿ ತಕ್ಷಣ ಕಾನೂನನ್ನು ಮಾಡಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಮಾಡಬೇಕು, ಎಂಬ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ ಇವರು ಮಾಡಿದ್ದಾರೆ.ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರುನಡೆದ ಆಂದೋಲನದಲ್ಲಿ ಮಾತನಾಡಿದರು.ಈ ಸಮಯದಲ್ಲಿ ಶ್ರೀರಾಮನ ನಾಮಜಪವನ್ನೂ ಮಾಡಲಾಯಿತು.
* ಆಂದೋಲನದಲ್ಲಿ ಮಾಡಲಾದ ಇತರ ಬೇಡಿಕೆಗಳು :
1. ತೀರ್ಥಕ್ಷೇತ್ರಗಳಲ್ಲಿ ಮದ್ಯ-ಮಾಂಸಗಳ ಮಾರಾಟದ ಮೇಲೆ ನಿಬರ್ಂಧ ತರಬೇಕು ಮತ್ತು ಮಂದಿರಗಳ ಸರಕಾರೀಕರಣವನ್ನು ತೆಗೆದುಹಾಕಿ ಮಂದಿರವನ್ನು ಪುನಃ ಭಕ್ತರ ವಶಕ್ಕೆ ಒಪ್ಪಿಸಬೇಕು.
2. ಮಾರುತಿಯನ್ನು ಮುಸಲ್ಮಾನ, ಜಾಟ, ಚೀನಿ, ಕ್ರೀಡಾಪಟು ಮುಂತಾದ ಹೆಸರುಗಳಿಂದ ಸಂಬೋಧಿಸುವವರ ಮೇಲೆ ಕಠೋರ ಕಾರ್ಯಾಚರಣೆ ಮಾಡಬೇಕು.
3. ವಿದ್ಯಾಲಯ-ಮಹಾವಿದ್ಯಾಲಯಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಶಿಕ್ಷಣವನ್ನು ನೀಡಲು ಆಗ್ರಹ.

ಜಾಹೀರಾತು

ಜಾಹೀರಾತು
ಜಾಹೀರಾತು