Recent Posts

Sunday, January 19, 2025
ಸುದ್ದಿ

Breaking News : ಕೆಲಸದ ಆಮಿಷವೊಡ್ಡಿ ಮೂವರು ಮೈಸೂರಿನ ಪಾದ್ರಿಗಳಿಂದ ಅಪ್ರಾಪ್ತೆ ಮೇಲೆ ಮಂಗಳೂರಿನಲ್ಲಿ ಅತ್ಯಾಚಾರ! – ಕಹಳೆ ನ್ಯೂಸ್

ಮೈಸೂರು: ಮೂವರು ಪಾದ್ರಿಗಳು ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸೆಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಎನ್.ಆರ್ ಮೊಹಲ್ಲಾದ ಬಾಲಕಿ ಮೇಲೆ ಪಾದ್ರಿಗಳು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಬಾಲಕಿ ತಾಯಿಗೆ ಮನೆ ಕಟ್ಟಲು 1 ಲಕ್ಷ ಕೊಡುವುದಾಗಿ ಆಮಿಷವೊಡ್ಡಿ, ಬಾಲಕಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಪಾದ್ರಿ ಸೆಬಾಸ್ಟಿಯನ್ ಮಂಗಳೂರಿಗೆ ಕರೆದೊಯ್ದಿದ್ದಾನೆ. ಮೋಸದಿಂದ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದ ಸೆಬಾಸ್ಟಿಯನ್ ಜೊತೆ ಇನ್ನಿಬ್ಬರು ಪಾದ್ರಿಗಳು ಸೇರಿ ಅತ್ಯಾಚಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಪಿಗಳಿಂದ ಹೇಗೋ ತಪ್ಪಿಸಿಕೊಂಡು ಬಾಲಕಿ ಮೈಸೂರಿಗೆ ಬಂದಿದ್ದಾಳೆ. ಬಳಿಕ ಸ್ವಸಹಾಯ ಸಂಘದ ನೆರವಿನಿಂದ ಬೆಂಗಳೂರಿನ ಹೈಕೋರ್ಟ್‍ಗೆ ಬಾಲಕಿಯ ಪೋಷಕರು ದೂರು ಸಲ್ಲಿಸಿದ್ದಾರೆ. ಬಳಿಕ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಕಮೀಷನರ್ ಗೆ ಹೈಕೋರ್ಟ್ ಸೂಚನೆ ನೀಡಿದೆ. ಘಟನೆ ಬೆಳಕಿಗೆ ಬರುತ್ತಿದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

ಸದ್ಯ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಸೆಬಾಸ್ಟಿಯನ್ ಹಾಗೂ ಇತರೆ ಆರೋಪಿಗಳ ಮೇಲೆ ಪೋಸ್ಕೋ ಕಾಯ್ದೆ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.