Recent Posts

Sunday, January 19, 2025
ಸುದ್ದಿ

Breaking News : ಕುಂತೂರಿನಲ್ಲಿ ಭೀಕರ ಅಪಘಾತ ; ಶರವೂರಿನ ಯುವಕ ಸ್ಥಳದಲ್ಲೆ ಮೃತ್ಯು – ಕಹಳೆ ನ್ಯೂಸ್

ಕಡಬ ಫೆ.03 : ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರಿನಲ್ಲಿ ಭಾನುವಾರ ರಾತ್ರಿ ಬೈಕ್ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಸವಾರನನ್ನು ಆಲಂಕಾರು ಸಮೀಪದ ಶರವೂರು ನಿವಾಸಿ ದಿನೇಶ್ (30) ಎಂದು ಗುರುತಿಸಲಾಗಿದೆ. ಕಡಬದಿಂದ ಆಲಂಕಾರು ಕಡೆಗೆ ತೆರಳುತ್ತಿದ್ದ ಪಿಕಪ್ ಹಾಗೂ ಕಡಬ ಕಡೆಗೆ ಆಗಮಿಸುತ್ತಿದ್ದ ಬೈಕ್‌ ನಡುವೆ ಕುಂತೂರು ಸಮೀಪದ ಅನ್ನಡ್ಕ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿರಿಸಲಾಗಿದೆ.

ವರದಿ : ಗಣೇಶ್ ಕಡಬ