Saturday, November 23, 2024
ಸುದ್ದಿ

ಊರಿನ ಜಾತ್ರೆಯ ಆಚರಣೆ ಹಿಂದೆ ಲೋಕ ಕಲ್ಯಾಣದ ಉದ್ದೇಶವಿದೆ: ಅನನ್ಯ.ಸಿ – ಕಹಳೆ ನ್ಯೂಸ್

ಪುತ್ತೂರು: ಜಾತ್ರಾ ಮಹೋತ್ಸವದ ಮೂಲ ಉದ್ದೇಶ ಲೋಕ ಕಲ್ಯಾಣ. ಅನಾದಿ ಕಾಲದಿಂದಲೂ ಜಾತ್ರಾ ಉತ್ಸವವು ಆಚರಣಾ ಪದ್ದತಿಯ ಪ್ರಕಾರ ನಡೆದುಕೊಂಡು ಬಂದಿವೆ. ದ್ವಜಾರೋಹಣದಿಂದ ಪ್ರಾರಂಭವಾಗಿ ಅವರೋಹಣದವರೆಗೂ ಹಲವಾರು ರೀತಿರಿವಾಜುಗಳು ಇದರಲ್ಲಿ ಅಡಕವಾಗಿದೆ ಎಂದು ವಿವೇಕಾಂದ ಕಾಲೇಜಿನ ಸ್ನಾತ್ತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಅನನ್ಯ.ಸಿ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಜಾತ್ರೆಯ ಸಂಭ್ರಮ ಎಂಬ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಗಿ ಅಗಮಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಊರಿನವರೆಲ್ಲಾ ಒಟ್ಟಾಗಿ ಸಂಭ್ರಮದಿಂದ ಉತ್ಸವವನ್ನು ಆಚರಿಸುವುದು ಇದರ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮೂಲ ಸಂಕಲ್ಪದ ಅರಿವು ಯುವಜನರಲ್ಲ್ಲಿ ಮರೆಯಾಗುತ್ತಿದೆ. ಜಾತ್ರೆ ಕೇವಲ ಸಂತೆಗಷ್ಟೆ ಮೀಸಲಾಗುತ್ತಿರುವುದು ಬೇಸರದ ಸಂಗತಿ. ಆಚರಣೆಯ ಹಿಂದಿರುವ ಅರ್ಥವನ್ನು ಅರಿಯುವುದು ಅತ್ಯಂತ ಪ್ರಮುಖವಾದ ಸಂಗತಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ರಾಮಕಿಶನ್, ಜೀವಿತಾ, ರಮ್ಯಶ್ರೀ, ದೀಕ್ಷೀತಾ, ಕಾರ್ತಿಕ್, ವಿನೀತಾ ,ಚರೀಷ್ಮಾ, ಮೇಘಾ, ಆಕರ್ಶ, ಜಯಶ್ರೀ, ಸತ್ಯಾನಂದ ಮತ್ತು ಅಕ್ಷಯ್ ವೇದಿಕೆಗೆ ಬಂದು ತಮ್ಮ ಅನಿಬವಗಳನ್ನು ಹಂಚಿಕೊಂಡರು. ವಿನೀತಾ ವಾರದ ಉತ್ತಮ ಮತುಗಾರರಾಗಿಯೂ ದ್ವಿತೀಯ ಪತ್ರಿಕೋದ್ಯಮದ ವಿದ್ಯಾರ್ಥಿಗಳ ತಂಡ ವಾರದ ಮಾತುಗಾರ ತಂಡವಾಗಿಯೂ ಮೂಡಿ ಬಂದಿತು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮದ ಕಾರ್ಯದರ್ಶಿ ಮೇಘಾ ಉಪಸ್ಥಿತರಿದ್ದರು. ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಕಾವ್ಯಶ್ರೀ ಭಟ್ ಸ್ವಾಗತಿಸಿ ವಿದ್ಯಾರ್ಥಿ ಅಕ್ಷಯ್ ವಂದಿಸಿದರು. ವಿದ್ಯಾರ್ಥಿನಿ ಕೃಪಾ ಕಾರ್ಯಕ್ರಮ ನಿರ್ವಹಿಸಿದರು.