Recent Posts

Monday, January 20, 2025
ಸುದ್ದಿ

ಕುಮಾರಸ್ವಾಮಿ ಫಾರ್ ಸಿ.ಎಂ. ಪೇಜ್ ವಿರುದ್ಧ ಪ್ರಕರಣ ದಾಖಲು | ರಾಜಕೀಯ ವೇಶ್ಯೆ ಯಾರು ? – ಹರೀಶ್ ಪೂಂಜಾ ವಾಗ್ದಾಳಿ.

ಬೆಳ್ತಂಗಡಿ : ಕುಮಾರಸ್ವಾಮಿ ಫಾರ್ ಸಿಎಂ ಎಂಬ ಪೇಜೊಂದು ದ.ಕ. ಯುವಮೋರ್ಛಾ ಜಿಲ್ಲಾಧ್ಯಕ್ಷರಾದ ಹರೀಶ್ ಪೂಂಜಾ ಹಾಗು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿಯವರ ಚಿತ್ರವನ್ನು ಫೋಟೋ ಶಾಪ್ ಮೂಲಕ ವಿರೂಪಗೊಳಿಸಿ ಹರಡುತ್ತಿರುವುದನ್ನು ಗೆಳೆಯರು ಗಮಸಿದ ಪೂಂಜಾ ಬೆಳ್ತಂಗಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ನಂತರ ಮಾತನಾಡಿದ ಅವರು ಕುಮಾರಸ್ವಾಮಿಯ ಸೂಟ್ ಕೇಸ್ ಸಿದ್ಧಾಂತ ನಮ್ಮದಲ್ಲ ಎನ್ನುವುದು ಈ ಮೂರ್ಖರಿಗೆ ಅರ್ಥವಾಗಬೇಕಿತ್ತು. ಸೂಟ್ ಕೇಸಿನಲ್ಲೆಷ್ಟು ಕಂತೆಯಿದೆ ಎನ್ನುವ ಸಿದ್ಧಾಂತವನ್ನೇ ನಿಮ್ಮ ನಾಯಕರು ನಿಮಗೆ ಹೇಳಿಕೊಟ್ಟಿರಬಹುದು, ತಲೆಗೊಂದಷ್ಟು ದುಡ್ಡು, ಕಾಕಾ ಹೋಟೆಲಿನ ಬಿರಿಯಾನಿಯನ್ನೋ, ಸಾರಾಯಿಯನ್ನೋ ಕೊಟ್ಟು ಕಾರ್ಯಕರ್ತರನ್ನು ಕರೆತರುವ ನಿಮ್ಮ ಯೋಗ್ಯತೆಗೆ ತಕ್ಕಂತೆಯೇ ಮೆಮೆ ಮಾಡಿದ್ದೀರಿ. ತತ್ವ-ಸಿದ್ಧಾಂತವೆಂದರೆ ಕೆಜಿಗೆಷ್ಟು ಎಂದು ಕೇಳುವ ನಿಮ್ಮ ತುಕ್ಕು ಹಿಡಿದ ತಲೆಗೆ ಇದಕ್ಕಿಂತ ಕಿತ್ತೋದ ಐಡಿಯಾ ಬರಲಿಕ್ಕೆ ಸಾಧ್ಯವೇ?
ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅಂತೊಂದು ಗಾದೆಯಿದೆಯಲ್ಲ, ಹಾಗೆಯೇ ‘ಸೂಟ್ ಕೇಸ್’ ಸಿದ್ಧಾಂತದಡಿ ನಡೆಯುತ್ತಿರುವ ನಿಮ್ಮ ಚಾಳಿಯೇ ಊರೆಲ್ಲ ಹಬ್ಬಿದೆ ಎಂದುಕೊಂಡಿದ್ದೀರಾ? ಅಥವಾ ಮೆಮೆ ಮಾಡುವಾಗ ಕುಮಾರಸ್ವಾಮಿ ಕನಸಿನಲ್ಲಿ ಬಂದಿದ್ದರಾ? ಇಷ್ಟಕ್ಕೂ ನಿಮ್ಮ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆ ನಿಮ್ಮದೇ ಪಕ್ಷದ ರಾಷ್ಟ್ರ, ರಾಜ್ಯಾಧ್ಯಕ್ಷರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣನವರೇ ನಮ್ಮ ಪಕ್ಷದಲ್ಲಿ ಸೂಟ್ ಕೇಸ್ ಸಂಸ್ಕೃತಿಯಿದೆ ಎಂದು ಹೇಳಿದ್ದು ನೆನಪಿರಬೇಕಲ್ಲವೇ? ವಿಧಾನಪರಿಷತ್ ಚುನಾವಣೆ ಸಂಧರ್ಭದಲ್ಲಿ ಹಣವಿಲ್ಲದೆ ರಾಜಕೀಯ ನಡೆಯೋದಿಲ್ಲ ಕಣ್ರೀ ಎಂದು ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರೇ ಹೇಳಿರಲಿಲ್ಲವೇ? ಅದಕ್ಕೆ ಸಾಕ್ಷಿಯಾಗಿ ನಿಮ್ಮ ಪಕ್ಷ ಎಮ್ಮೆಲ್ಸಿಯನ್ನಾಗಿ ಮಾಡಿದ್ದು ಒಂದು ಕಾಲದಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆಯುತ್ತಿದ್ದ ಬೆಂಗಳೂರಿನ ಸೌಂಡ್ ಪಾರ್ಟಿಯನ್ನೇ ಹೊರತು ಎಂ.ಸಿ ನಾಣಯ್ಯನಂತಹ ಮುತ್ಸದ್ಧಿಗಳನ್ನಲ್ಲ. ಅದೇ ಸೂಟ್ ಕೇಸ್ ಸಿದ್ಧಾಂತಕ್ಕೆ ಕಟ್ಟುಬಿದ್ದು ರಾಜಕೀಯ ಜೀವನ ಕೊಟ್ಟ ರಾಮನಗರ ಜನತೆಗೆ ಕೈಕೊಟ್ಟು ಚಿಕ್ಕಾಬಳ್ಳಾಪುರದಲ್ಲಿ ಚುನಾವಣೆಗೆ ನಿಂತವರಲ್ಲವೇ ನಿಮ್ಮ ಕುಮಾರಸ್ವಾಮಿ?ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಪಕ್ಷದ ನಾಯಕರಂತೆ, ಕಾರ್ಯಕರ್ತರಿಗೂ ಸದಾಕಾಲ ನೋಟಿನ ಚಿಂತೆಯೇ ಇರುವಂತಿದೆ.
ಬಿಜೆಪಿಯಂತಹ ಐಡಿಯಾಲಜಿ ನಿಷ್ಠ ಪಕ್ಷದ ಕಾರ್ಯಕರ್ತರು ಇವರಂತೆಯೇ ಸೂಟ್ ಕೇಸ್ ಗಾಗಿ ಕೆಲಸ ಮಾಡುವವರು ಎಂದು ಈ ಮೂರ್ಖರು ನಂಬಿಕೊಂಡಿರುವಂತಿದೆ. ಮೂರ್ಖರೇ, ಕೆಲವು ವಿಷಯ ಅರ್ಥ ಮಾಡಿಕೊಳ್ಳಿ. ನಂಬಿದ ತತ್ವ ಸಿದ್ಧಾಂತಗಳಿಗಾಗಿ ಬಲಿದಾನಗೈದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯರಂತಹ ಮೇರು ನಾಯಕರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿರುವ ಕಾರ್ಯಕರ್ತ ನಾನು. ಪಕ್ಷಕ್ಕಾಗಿ ಪ್ರಾಣವನ್ನು ಕೊಡಲು ತಯ್ಯಾರು. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎಂಬ ಊಸರವಳ್ಳಿ ಸಿದ್ಧಾಂತ ಯಾರದು ಎಂದು ನಿಮ್ಮ “ಸ್ವಾಮಿ”ಗಳನ್ನೇ ಕೇಳಿ ನೋಡಿ. ಸೂಟ್ ಕೇಸಿಗಾಗಿ ಸಿದ್ಧಾಂತವನ್ನು ಮಾರಿಕೊಳ್ಳುವ ರಾಜಕೀಯ ವೇಶ್ಯೆ ಯಾರು ಎನ್ನುವುದನ್ನು ಈ ರಾಜ್ಯದ ಜನರು ನೋಡಿದ್ದಾರೆ.
ಪದೇ ಪದೇ ಯೂ ಟರ್ನ್ ಮಾಡುವ ನಿಮ್ಮ ನಾಯಕ ಕುಮಾರಸ್ವಾಮಿಯವರ ನೈತಿಕತೆ ಎಂತದ್ದು ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಅದು ಸಿದ್ಧರಾಮಯ್ಯನವರ ದುಬೈ ವಾಚಿನ ಪ್ರಕರಣವಿರಬಹುದು, ಗಣಪತಿಯವರ ಕೇಸಿನಲ್ಲಿ ಜಾರ್ಜ್ ಪರ ವಹಿಸಿದ್ದೆ ಇರಬಹುದು. ರಾಜಕೀಯ ಲಾಭಕ್ಕಾಗಿ ಯಾರನ್ನು ಬೇಕಾದರೂ ಕೂಡಿಕೊಳ್ಳುವ, ಯಾರನ್ನು ಬೇಕಾದರೂ ದೂರ ತಳ್ಳುವ ನಾಯಕನ ಪಕ್ಷದಲ್ಲಿರುವ ನಿಮಗೆ ತತ್ವ-ಸಿದ್ಧಾಂತದ ನಿಷ್ಠೆ ಬಗ್ಗೆ ಏನು ಗೊತ್ತಾಗಬಲ್ಲದು? ಬಿಡಿ…

ಜಾಹೀರಾತು
ಜಾಹೀರಾತು
ಜಾಹೀರಾತು

ಕಾನೂನು ತನ್ನ ಕೆಲಸ ಮಾಡಲು ಪ್ರಾರಂಭ ಮಾಡಿದೆ.
ಪೊಲೀಸರು ಬಂದು ನಿಮ್ಮ ಮನೆ ಬಾಗಿಲು ತಟ್ಟಿದಾಗ, ಇವೆಲ್ಲ ಅರ್ಥವಾಗಬಹುದು ಕಾಯುತ್ತಿರಿ ಎಂದು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response