Sunday, November 24, 2024
ಸುದ್ದಿ

ಸಾಹಿತ್ಯವು ವಿವಾದಕ್ಕೆ ಮೂಲವಾಗಬಾರದು: ಪುನೀತ್ ಎಸ್ – ಕಹಳೆ ನ್ಯೂಸ್

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಎಂಬುದು ಪ್ರಚಾರದ ವಸ್ತುವಾಗುತ್ತಿರುವುದು ದುರಂತ. ಸಾಹಿತ್ಯವು ವಿವಾದದ ವಸ್ತುವಾಗಬಾರದು. ಸತ್ಯಾಸತ್ಯತೆಯನ್ನು ನಿರೂಪಿಸುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಪುನೀತ್‍ ಎಸ್ ಹೇಳಿದರು.

ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಐಚ್ಚಿಕ ಕನ್ನಡ ವಿದ್ಯಾರ್ಥಿಗಳು ಆಯೋಜಿಸುತ್ತಿರುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಿತ್ಯದಲ್ಲಿ ಹೊಸತನವನ್ನು ರಚಿಸಿದಾಗ ನಮ್ಮನ್ನು ಟೀಕಿಸುತ್ತಾರೆ ಎಂದು ಸುಮ್ಮನಾಗಬಾರದು. ನಮ್ಮ ಸಾಹಿತ್ಯದ ಮೂಲಕವೇ ನಮ್ಮ ಸಾಮಥ್ರ್ಯವನ್ನು ತಿಳಿಸಬೇಕು. ಕಣ್ಣಿಗೆ ಕಂಡ ಪುಟ್ಟ ಘಟನೆಯನ್ನು ವಿಭಿನ್ನವಾಗಿ ವರ್ಣಿಸಲು ಸಾಹಿತ್ಯದಿಂದ ಸಾಧ್ಯವಾಗಿದೆ. ದೇವರನ್ನು ಒಲಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಟಿ ಮಾತನಾಡಿ ಸಾಹಿತ್ಯವನ್ನು ಓದಿದಾಗ ಮಾತ್ರ ವಿಮರ್ಶೆಗಳು ಅರ್ಥವಾಗಲು ಸಾಧ್ಯ. ಸಾಹಿತ್ಯದ ಜತೆಗೆ ಸಾಹಿತಿಗಳು ನಡವಳಿಕೆಗಳು ಹೇಗಿವೆ ಎಂಬುವುದನ್ನು ವಿಮರ್ಶಿಸುವವರು ಸಮಾಜದಲ್ಲಿದ್ದಾರೆವಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಕೆ.ಮನೀಷಾ ಶೆಟ್ಟಿ, ಪ್ರತಿಮಾ ಭಟ್, ಜೀವಿತಾ ಪುಸ್ತಕ ವಿಮರ್ಶೆ ಹಾಗೂ ಕವನ ವಾಚಿಸಿದರು. ವಿದ್ಯಾರ್ಥಿನಿ ಹರ್ಷಿತಾ ಬಿ.ಎ ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.