Sunday, November 24, 2024
ರಾಜಕೀಯಸುದ್ದಿ

ಚಿಟ್ ಫಂಡ್ ಹಗರಣ: ಪ. ಬಂಗಾಳದಲ್ಲಿ ದೀದಿ, ಕೇಂದ್ರ ಸರ್ಕಾರದ ವಿರುದ್ಧ ಅಘೋಷಿತ ಸಂಘರ್ಷ – ಕಹಳೆ ನ್ಯೂಸ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲೀಗ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರ, ರಾಜ್ಯ ಪೊಲೀಸರು ಮತ್ತು ಸಿಬಿಐ ಮಧ್ಯೆ ದೊಡ್ಡ ಸಂಘರ್ಷ ನಡೀತಿದೆ. ಚಿಟ್ ಫಂಡ್ ಹಗರಣ ಸಂಬಂಧ ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್‍ರನ್ನು ಪ್ರಶ್ನಿಸಲು ಅವರ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ತಡೆದಿದ್ದಲ್ಲದೇ, ತಮ್ಮ ಜೀಪ್‍ಗಳಲ್ಲಿ ಅವರನ್ನ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆ ದೀದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಘೋಷಿತ ಸಂಘರ್ಷಕ್ಕೆ ನಾಂದಿ ಹಾಡಿದೆ. ಲೋದಾನ್ ರಸ್ತೆಯ ಪೊಲೀಸ್ ಮುಖ್ಯಸ್ಥರ ಮನೆಗೆ ಇಂದು ಸಂಜೆ 40 ಸಿಬಿಐ ಅಧಿಕಾರಿಗಳಿದ್ದ ತಂಡ ದಾಳಿಯಿಟ್ಟಿತ್ತು. ಆಗ ಅವರನ್ನು ತಡೆದ ರಾಜ್ಯ ಪೊಲೀಸರು, ಬಲವಂತವಾಗಿ ಅಲ್ಲಿಂದ ಅವರನ್ನೆಲ್ಲ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಸಿಬಿಐ ಮೂಲಗಳು ಹೇಳುತ್ತಿವೆ. ಆದ್ರೇ, ರಾಜ್ಯ ಪೊಲೀಸರು ಹೇಳುತ್ತಿರೋದೇ ಬೇರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ:
ಇತ್ತ ಕುಮಾರ್ ನಿವಾಸಕ್ಕೆ ಆಗಮಿಸಿದ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯ ಪೊಲೀಸ್ ಹಾಗೂ ಇತರೆ ಸಂಸ್ಥೆಗಳನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳಲು ಕೇಂದ್ರ ಸರ್ಕಾರ ಆಡಳಿತ ಅತಿಕ್ರಮಣ ಮಾಡುತ್ತಿದೆ. ಪ್ರಧಾನಿ ಮೋದಿ-ಅಮಿತ್ ಶಾ ಜೋಡಿ ರಾಜಕೀಯ ಪ್ರತೀಕಾರಕ್ಕೆ ಯತ್ನಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಕ್ಕೂಟ ವ್ಯವಸ್ಥೆ ಉಳಿಯಬೇಕಿದೆ. ಇವತ್ತು ಮೆಟ್ರೋ ಚಾನೆಲ್ ಬಳಿಯೇ ಧರಣಿ ಕೂರುವೆ. ನಾಳೆಯಿಂದ ವಿಧಾನಸಭೆಯ ಎಲ್ಲ ಕೆಲಸಗಳನ್ನೂ ಇಲ್ಲಿಂದ್ಲೇ ಮಾಡುವೆ. ಆ ಮೂಲಕ ಸತ್ಯಾಗ್ರಹ ನಡೆಸೇ ತೀರುವೆ ಎಂದು ಬಿಜೆಪಿ ವಿರುದ್ಧ ಮಮತಾ ದೀದಿ ಘರ್ಜಿಸಿದ್ದಾರೆ.

ಬಂಧನದ ಕುರಿತಂತೆ ಪೊಲೀಸರು ಏನಂತಾರೆ?
ಆದ್ರೇ, ಸಿಬಿಐ ಅಧಿಕಾರಿಗಳ ಬಂಧನ ಎಂಬ ಆರೋಪವನ್ನ ಬಂಗಾಳ ಪೊಲೀಸರು ತಳ್ಳಿ ಹಾಕಿದ್ದಾರೆ. ವಿಚಾರಣೆ ನಡೆಸಲು ಸಿಬಿಐ ಬಳಿ ಸರಿಯಾದ ದಾಖಲೆಗಳಿವೆ ಎಂದು ಪರೀಕ್ಷಿಸಲಷ್ಟೇ ಅಧಿಕಾರಿಗಳನ್ನ ಠಾಣೆಗೆ ಕರೆತರಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅತ್ತ ಡಿಜಿಪಿ ವೀರೇಂದ್ರ ಹಾಗೂ ಎಡಿಜಿ ಅನೂಜ್ ಶರ್ಮಾ, ರಾಜೀವ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲದೇ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು, ಸಿಬಿಐ ಪ್ರಧಾನ ಕಚೇರಿ ಸಿಜಿಒ ಕಾಂಪ್ಲೆಕ್ಸ್‍ಗೂ ಸಹ ತೆರಳಿದ್ದಾರೆ ಎನ್ನಲಾಗಿದೆ.

ಶಾರದಾ ಚಿಂಟ್ ಫಂಡ್ ಹಗರಣ :
ಶಾರದಾ ಅಂಡ್‍ರೋಸ್ ವ್ಯಾಲೆ ಪೊಂಝಿ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತ ರಾಜೀವ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೀತಿದೆ ಅಂತ ಇಂದು ಬೆಳಗ್ಗೆಯಷ್ಟೇ ಸಿಬಿಐ ಅಧಿಕಾರಿಗಳು ಆರೋಪಿಸಿದ್ದರು.

ಇದರ ಬೆನ್ನಲ್ಲೆ ಸಂಜೆ ಅಧಿಕಾರಿಗಳ ತಂಡ ರಾಜೀವ್‍ಕುಮಾರ್ ಮನೆಗೆ ದಾಳಿಯಿಟ್ಟಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳ ಮಧ್ಯೆ ಗಲಭೆ ಸಹ ನಡೆಯಿತು ಎಂತಿವೆ ಮೂಲಗಳು.