Monday, November 25, 2024
ಸುದ್ದಿ

ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು – ಕಹಳೆ ನ್ಯೂಸ್

ಲಂಡನ್: ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಸಚಿವಾಲಯ ಅಸ್ತು ಎಂದಿದೆ.

ವಿಜಯ್ ಮಲ್ಯ ಗಡಿಪಾರು ಮಾಡಲು ಬ್ರಿಟನ್ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಮೋದಿಗೆ ರಾಜತಾಂತ್ರಿಕ ಗೆಲುವು ಸಿಕ್ಕಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಮಲ್ಯ ಗಡಿಪಾರಿಗೆ ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಒಪ್ಪಿಗೆ ನೀಡಿತ್ತು. ಅದಾದ ಬಳಿಕ ಆದೇಶವನ್ನು, ಬ್ರಿಟನ್ ಸರ್ಕಾರದ ಗೃಹ ಸಚಿವಾಲಯ​ದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಇದೀಗ ಬ್ರಿಟನ್ ಸಚಿವಾಲಯವು ಕೂಡ ಮಲ್ಯ ಗಡಿಪಾರಿಗೆ ಅಸ್ತು ಎಂದಿದ್ದು ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ವಿವಿಧ ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ ಒಟ್ಟು 9 ಸಾವಿರ ಕೋಟಿ ರೂ. ಸಾಲ ನೀಡಬೇಕಿದ್ದು, ಇದಕ್ಕೂ ಮೊದಲೇ ಮಲ್ಯ ಗೌಪ್ಯವಾಗಿ ಲಂಡನ್‌ಗೆ ಪರಾರಿಯಾಗಿದ್ದರು.