ಗಾಂಧೀಜಿಯ ಬಗ್ಗೆ ಮಕ್ಕಳು, ಯುವಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂತಹ ಕೆಲಸವನ್ನು ಸಂಘ ಪರಿವಾರ ಮಾಡುತ್ತಲೇ ಬಂದಿದೆ: ರಮಾನಾಥ ರೈ ಟೀಕೆ – ಕಹಳೆ ನ್ಯೂಸ್
ಗಾಂಧೀಜಿಯನ್ನು ಅಪಮಾನ ಮಾಡಿ ಮಕ್ಕಳು, ಯುವಜನರ ಮನಸ್ಸಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂತಹ ಕೆಲಸವನ್ನು ಸಂಘ ಪರಿವಾರ ಮಾಡುತ್ತಲೇ ಬಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಗಾಂಧಿ ಪ್ರತಿಕೃತಿ ಮಾಡಿ ಅದರಲ್ಲಿ ಹತ್ಯೆ ಮಾಡುವುದನ್ನು ಮರುಸೃಷ್ಟಿಸಿದ ಘಟನೆಯನ್ನು ಖಂಡಿಸಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗಾಂಧಿ ಹತ್ಯೆಯನ್ನು ಸಮರ್ಥಿಸುವ ಮತೀಯವಾದಿಗಳನ್ನು ಮೂಲೋತ್ಪಾಟನೆ ಮಾಡುವ ಮೂಲಕ ಅವರಿಗೆ ಪಾಠ ಕಲಿಸಬೇಕು.
ಗಾಂಧಿ ಹತ್ಯೆ ಪ್ರಾತ್ಯಕ್ಷಿಕೆ ನಮಗೆ ದೊಡ್ಡ ಅಘಾತ ತಂದಿದೆ. ಇಡೀ ಜಗತ್ತಿನಲ್ಲಿ ಗಾಂಧೀಜಿಯವರ ಪುಣ್ಯತಿಥಿ ದಿನವನ್ನು ಅಹಿಂಸಾ ದಿನವಾಗಿ ಘೋಷಣೆ ಮಾಡಲಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪಾಲ್ಗೊಂಡಿದ್ದರು.