ವೈದ್ಯರನ್ನ ನಾವು ದೇವರು ಅಂತೀವಿ, ರೋಗ ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಜೀವ ವೈದ್ಯರ ಕೈಯಲ್ಲಿರುತ್ತದೆ, ಆದ್ರೆ ಮನುಷ್ಯನ ಜೀವದ ಜೊತೆ ಆಟವಾಡ್ತಾ ಇರೋ ಮಾರಣಾಂತಿಕ ಕಾಯಿಲೆ ಅಂದ್ರೆ ಅದು ಕ್ಯಾನ್ಸರ್.
ಈ ಕಾಯಿಲೆಯನ್ನ ಸಂಪೂರ್ಣವಾಗಿ ದೂರ ಮಾಡೋದಿಕ್ಕೆ ಸಾದ್ಯವಿಲ್ಲ ಹೀಗಾಗಿ ಈ ಕಾಯಿಲೆ ಬಾರದಂತೆ ಯಾವೆಲ್ಲ ಕ್ರಮಗಳನ್ನ ಕೈಗೊಳ್ಳಬೇಕು ಅನ್ನೋದನ್ನ ಯಕ್ಷಗಾನ ಪಾತ್ರದಾರಿಗಳು ವಿನೋತನವಾಗಿ ಯಕ್ಷ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿದಿದ್ದಾರೆ.
ಹೌದು, ಮಂಗಳೂರಿನ ವಿವಿಧ ಆಸ್ಪತ್ರೆಗಳ ವೈದ್ಯರು ‘ಅರ್ಬುದಾಸುರ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶಿಸುಸುವುದರ ಮೂಲಕ ಪ್ರೇಕ್ಷಕರು ಬೆರಗಾಗುವಂತೆ ಮಾಡಿದ್ದಾರೆ.
ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸತ್ಯಮೂರ್ತಿ ಐತಾಳ್ ಮತ್ತು ಕುಟುಂಬ ವೈದ್ಯ ಡಾ.ಅಣ್ಣಯ್ಯ ಕುಲಾಲ್ ‘ಅರ್ಬುದಾಸುರ ಗರ್ವಭಂಗ’ ಯಕ್ಷಗಾನದ ಕಥಾ ಹಂದರವನ್ನು ನಿರೂಪಿಸಿದ್ದು, ಹಿರಿಯ ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ ಪದ್ಯ ರಚಿಸಿದರು.
ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವ್ಯಸನಗಳು, ರೋಗ ಪತ್ತೆ ಮಾಡುವ ಮೂಲ, ರೋಗದ ನಿಯಂತ್ರಣಕ್ಕೆ ಅನುಸರಿಸಬೇಕಾದ ಅಂಶಗಳು, ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಇರಬೇಕಾದ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ವೈದ್ಯರುಗಳು ಯಕ್ಷಗಾನದ ಮೂಲಕ ಮಾಡಿದರು.
ಒಟ್ಟಿನಲ್ಲಿ ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಸತ್ಯವಗಿದೆ, ಯಾವಾಗಲೂ ರೋಗಿಗಳು, ಆಪರೇಷನ್, ಮೆಡಿಸಿನ್ ಎನ್ನುತ್ತಿದ್ದ ವೈದ್ಯರು ಯಕ್ಷಗಾನ ವೇಷ ಧರಿಸಿ ಮಂಗಳೂರಿನ ಜನತೆ ಮೆಚ್ಚುವ ಯಕ್ಷಗಾನದ ಮೂಲಕವೇ ಕ್ಯಾನ್ಸರ್ ರೋಗದ ಜಾಗೃತಿ ಮೂಡಿಸಿದರು.