ಮಂಗಳೂರು : ವಿಧಾನಪರಿಷತ್ತು ಚುನಾವಣೆ ಸಮೀಪಿಸಿದಂತೆ ದಕ್ಷಿಣ ಕನ್ನಡದಲ್ಲಿ ರಾಜಕೀಯ ಪಕ್ಷಗಳು ಭರದ ಸಿದ್ಧತೆಯಲ್ಲಿದೆ. ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಮೂರು ಪಕ್ಷಗಳು ಮುಂದಾಗಿದೆ. ಕಾಂಗ್ರೆಸ್ ಮತ್ತು ಜೇಡಿಎಸ್ ಈಗಾಗಲೇ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಳುಸಿ ತಮ್ಮ ಅಭ್ಯರ್ಥಿಗಳನ್ನು ನಿಚ್ಛಯ ಮಾಡಿದೆ. ಕಾಂಗ್ರೆಸ್ ನಿಂದ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾದ ಮಂಜುನಾಥ ಕಣ್ಣಕ್ಕಿಳಿಯುವುದು ಬಹುತೇಕ ಖಚಿತ. ಜೇಡಿಎಸ್ ನಿಂದ ಬೋಜೆಗೌಡರೇ ಅಭ್ಯರ್ಥಿ. ಇನ್ನೂಳಿದಂತೆ ಬಿ.ಜೆ.ಪಿ. ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ, ಏಳನೇ ತಾರೀಖು ಮತದಾರರಪಟ್ಟಿಗೆ ಸೇರ್ಪಡೆಗೆ ಕೊನೆಯ ದಿನ. ಆದರೂ, ಬಿ.ಜೆ.ಪಿ. ಆಮೆಗತಿಯನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಶಥಾಯ ಗಥಾಯ ಬಿ.ಜೆ.ಪಿ. ಅಧಿಕಾರಕ್ಕೆ ತರಲು ರಾಷ್ಟ್ರೀಯ ನಾಯಕರು ಪ್ರಯತ್ನ ಪಡುತ್ತಿದ್ದರಾದರು ರಾಜ್ಯ ನಾಯಕರು ತಮ್ಮ ಸ್ವಾರ್ಥ ಸಾಧನೆಯನ್ನೇ ನೋಡುತ್ತಿದ್ದಂತೆ ಕಾಣುತ್ತಿದೆ. ಮತದಾರರ ಪಟ್ಟಿಗೆ ಸೇರ್ಪಡೆಗಳಿಸೂದರಿಂದ ಹಿಡಿದು ಅಭ್ಯರ್ಥಿಗಳ ಆಯ್ಕೆವರೆಗೂ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಕಾರ್ಯಕರ್ತರಲ್ಲಿ, ಸಂಘದ ಹಿರಿಯರ ವಲಯದಲ್ಲಿ ತೀವ್ರ ಅಸಮಾಧಾನ ತಂದಿದೆ. ಎನ್ನಲಾಗುತ್ತಿದೆ.
ಯಾರು ಬಿ.ಜೆ.ಪಿ. ಅಭ್ಯರ್ಥಿ ?
ಹಾಲಿ ಪರಿಷತ್ತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಬದಲಾವಣೆಗೆ ಸಂಘದ ಹಿರಿಯರು ಮುಂದಾಗಿದ್ದಾರೆ, ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶ ಎನ್ನಲಾಗುತ್ತಿದೆ. ಸದ್ಯ ಕ್ಯಾ. ಕಾರ್ಣಿಕ್ ಕೂಡ ತ್ಯಾಗದ ಮನೋಭಾವ ಹೊಂದಿದ ವ್ಯಕ್ತಿ, ಹೊಸ ಮುಖಗಳನ್ನು ಪರಿಚಯಿಸುವಲ್ಲಿ ಅವರದ್ದೇನು ಕಿರಿಯಿಲ್ಲ, ಆದರೆ, ತನಗೆ ಟಿಕೆಟ್ ಈ ಬಾರಿಯೂ ದೊರೆತರೆ ಯಶಸ್ವಿಯಾಗಿ ನಿಭಾಯಿಸಭಲ್ಲೆ ಎಂಬುದು ಅವರ ಭಾವ. ಇನ್ನೂಳಿದಂತೆ ಪ್ರಬಲವಾಗಿ ಕೇಳಿ ಬರುವ ಎರಡು ಹೆಸರುಗಳ ಹಾಲಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ ಹಾಗೂ ಕರಾವಳಿ ಕಾಲೇಜು ಮುಖ್ಯಸ್ಥ ಗಣೇಶ್ ರಾವ್.ಜ
ಗಣೇಶ್ ರಾವ್ ಆರ್ಥಿಕವಾಗಿ ಪ್ರಭಾವ ಶಾಲಿಯಾಗಿದ್ದರೂ ಸಹ, ಮಂಗಳೂರಿನ ಎಲ್ಲಾ ಖಾಸಗಿ ಶಿಕ್ಷಣಸಂಸ್ಥೆಗಳ ಜೊತೆ ಅವರ ಸಂಬಂಧ ಅಷ್ಟಕಷ್ಟೇ, ಮತ್ತು ಮಡಿಕೇರಿ, ಉಡುಪಿ ಭಾಗಗಳಲ್ಲಿ ಕಾರ್ಯಕರ್ತರ ಸಂಪರ್ಕವೂ ಕಡಿಮೆ. ಇನ್ನೂಳಿದಿರುವುದು ಹರೀಶ್ ಆಚಾರ್. ಹಾಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ, ಸಹಕಾರ ಭಾರತಿಯಲ್ಲೂ ಉನ್ನತ ಜಾವಾಬ್ದಾರಿ ಹೊಂದಿದ ವ್ಯಕ್ತಿ, ಆರ್.ಎಸ್.ಎಸ್. ನಾಯಕರಿಗೂ ಹರೀಶ್ ಮೇಲೆ ಒಲವಿದೆ, ಆರ್ಥಿಕವಾಗಿ ಅಷ್ಟು ಬಲಿಷ್ಠರಲ್ಲದಿದ್ದರೂ ಸಂಘಟಮಾತ್ಮಕವಾಗಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲಿ ಪ್ರಭಾವ ಹೊಂದಿದ ವ್ಯಕ್ತಿ, ಸಿಂಡಿಕೇಟ್ ಸದಸ್ಯನಾದ ಕಾರಣ ಶಿಕ್ಷಣ ಸಂಸ್ಥೆಗಳ ಜೊತೆಗೂ ಸಂಬಂಧ ಚೆನ್ನಾಗಿಯೇ ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿ.ಜೆ.ಪಿ. ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.
ಇನ್ನುಳಿದಂತೆ ಬಿ.ಜೆ.ಪಿ. ಯಲ್ಲೇ ಹತ್ತಾರು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ. ಬಿ.ಜೆ.ಪಿ. ಮುಖಂಡರಾದ ರವಿಚಂದ್ರರೂ ಆಕಾಂಕ್ಷೆಗಳ ರೇಸಿನಲ್ಲಿದ್ದಾರೆ.
ಒಟ್ಟಾರೆ ಗೆಲ್ಲುವ ಕುದುರೆಯ ಅವಶ್ಯಕತೆ ಎಲ್ಲಾ ರಾಜಕೀಯ ಪಕ್ಷಕ್ಕೂ ಇದೆ.