ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಸಂಘಗಳ ಆಶ್ರಯದಲ್ಲಿ ಕೈಗಾರಿಕಾ ಸಂಸ್ಥೆಗಳ ಭೇಟಿ ಕಾರ್ಯಕ್ರಮ ನಡೆಯಿತು.
ದ್ವಿತೀಯ ಬಿ.ಕಾಂ ಹಾಗೂ ದ್ವಿತೀಯ ಬಿಬಿಎ ಯ ಒಟ್ಟು 75 ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ಭಂಟ್ವಾಳ ತಾಲೂಕಿನ ಬಲಿಪಗುಳಿಯ ಹಾಳೆ ತಟ್ಟೆ ಹಾಗೂ ಹಾಳೆಯ ವಿವಿಧ ಮಾದರಿಯ ವಿನ್ಯಾಸ ತಯಾರಿಕಾ ಘಟಕ ‘ಇಕೋಬ್ಲಿಸ್’ಗೆ ಭೇಟಿ ನೀಡಿ ತಯಾರಿಕೆಯ ವಿವಿಧ ಹಂತಗಳನ್ನು ವೀಕ್ಷಿಸಲಾಯಿತು.
ಅಂತೆಯೇ ಕಲ್ಲಡ್ಕದ ಶ್ರೀಕೃಷ್ಣ ಬ್ರಿಕ್ಸ್ ಗೆ ಭೇಟಿ ನೀಡಿ ಇಟ್ಟಿಗೆ ಹಾಗೂ ಇತರ ಮಣ್ಣಿನ ಮಾದರಿಗಳನ್ನು ತಯಾರಿಸುವ ರೀತಿಯನ್ನು ಗಮನಿಸಲಾಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ರೇಖಾ, ಅನ್ನಪೂರ್ಣ, ವಿದ್ಯಾ, ಗೌತಮ್ ಪೈ ಹಾಗೂ ಪುನೀತ್ ವಿದ್ಯಾಥಿಗಳಿಗೆ ಮಾರ್ಗದರ್ಶನ ನೀಡಿದರು.