Tuesday, January 21, 2025
ಸುದ್ದಿ

ಮಂಗಳೂರಿನಲ್ಲಿದೆ ಅನಗತ್ಯ ಸರ್ಕಲ್: ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮತ್ತು ಸಾಮಾಜಿಕ ಹೋರಾಟಗಾರ ಆಪಾದನೆ – ಕಹಳೆ ನ್ಯೂಸ್

ಮಂಗಳೂರು: ನಗರದ ರಸ್ತೆಗಳ ಮಧ್ಯೆ ಇರುವ ಸರ್ಕಲ್‌ಗಳು ಆಯಾ ನಗರದ ಅಂದ ಚಂದವನ್ನ ಹೆಚ್ಚಿಸುತ್ತೆ ಆದ್ರೆ ಮಂಗಳೂರಿನ ಲೇಡಿಹಿಲ್ ಸರ್ಕಲ್, ಕದ್ರಿ, ನಂದಿಗುಡ್ಡ, ಪಾಂಡೇಶ್ವರ, ಎ.ಬಿ.ಶೆಟ್ಟಿ ಸರ್ಕಲ್, ಹ್ಯಾಮಿಲ್ಟನ್ ಸರ್ಕಲ್, ಕ್ಲಾಕ್ ಟವರ್ ಹೀಗೆ ಅನಗತ್ಯವಾಗಿ ಸರ್ಕಲ್‌ಗಳನ್ನು ಇಡಲಾಗಿದೆ.

ಈ ಸರ್ಕಲ್ ನಿರ್ಮಿಸಿ ಇಲ್ಲಿ ಸಂಚಾರ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದು ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮತ್ತು ಸಾಮಾಜಿಕ ಹೋರಾಟಗಾರ ಹುಸೈನ್ ಕಾಟಿಪಳ್ಳ ಆಪಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕ್ಲಾಕ್ ಟವರ್ ಕಾಮಗಾರಿ ಆರಂಭಕ್ಕೆ ಮುಂಚೆ ವಿರೋಧ ವ್ಯಕ್ತಪಡಿಸಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕದ್ರಿ ಸರ್ಕಲ್ ನಿರ್ಮಾಣಕ್ಕೆ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಎಲ್ಲಾ ಸರ್ಕಲ್ ತೆರವು ಮಾಡುವಂತೆ ಮನವಿ ಮಾಡಿದರೂ ಅದಕ್ಕೆ ಯಾರು ಕ್ಯಾರೆ ಅನ್ನುತ್ತಿಲ್ಲ ಎಂದು ಆರೋಪಿಸಿದ್ದಾರೆ.