Monday, January 20, 2025
ರಾಜಕೀಯಸುದ್ದಿ

ವಿಧಾನಮಂಡಲ ಅಧಿವೇಶನ: ಭಾಷಣ ಮೊಟಕುಗೊಳಿಸಿ ಹೊರನಡೆದ ರಾಜ್ಯಪಾಲರು – ಕಹಳೆ ನ್ಯೂಸ್

ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ರಾಜ್ಯಪಾಲರು ಭಾಷಣದ ಆರಂಭದಲ್ಲೇ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾರಣ ರಾಜ್ಯಪಾಲರು ತಮ್ಮ ಭಾಷಣವನ್ನು ಮೊಟಕು ಗೊಳಿಸಿ ತೆರಳಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಓದಲು ಶುರುವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಜೋರಾಗಿ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. 22 ಪುಟಗಳ ರಾಜ್ಯಪಾಲರ ಭಾಷಣ ಕೇವಲ ಎರಡು ಪುಟಕ್ಕೆ ಮುಕ್ತಾಯವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಯಾವುದೇ ಅಡ್ಡಿ ಪಡಿಸಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ವೈ ಯಡಿಯೂರಪ್ಪ ಹೇಳಿಕೆ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಂದು ಭಾಷಣ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ಆರಂಭಿಸಿದ್ದರು. ಶಾಸಕರು ಬಾವಿಗಿಳಿದು ಪ್ರತಿಭಟನೆ ನಡೆಸಿದರೆ, ಯಡಿಯೂರಪ್ಪ ತಮ್ಮ ಸ್ಥಳದಲ್ಲಿ ನಿಂತು ಪ್ರತಿಭಟನೆ ನಡೆಸಿದರು.