Monday, January 20, 2025
ಸುದ್ದಿ

ಕೌಟಿಂಬಿಕ ವ್ಯಾಜ್ಯದಲ್ಲಿ ಪತಿ-ಪತ್ನಿಯರ ಕೌನ್ಸಿಲಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಲು ನ್ಯಾಯಾಲಯ ಅನುಮತಿ – ಕಹಳೆ ನ್ಯೂಸ್

ಕಾಸರಗೋಡು: ಕೌಟುಂಬಿಕ ನ್ಯಾಯಾಲಯದ ಚರಿತ್ರೆಯಲ್ಲಿ ಮೊತ್ತಮೊದಲಾಗಿ ಕೌಟಿಂಬಿಕ ವ್ಯಾಜ್ಯದಲ್ಲಿ ಪತಿ-ಪತ್ನಿಯರ ಕೌನ್ಸಿಲಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಪತಿಯು ವಿವಾಹ ವಿಚ್ಛೇದನ ಕೋರಿ ಪತ್ನಿಯ ವಿರುದ್ಧ 5.07.2017 ರಲ್ಲಿ ಕಾಸರಗೋಡಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ತದನಂತರ ಪತಿಯು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಬೇಕಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತಿ ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದುದರಿಂದ ಪತಿಯ ನ್ಯಾಯವಾದಿ ಪ್ರದೀಪ್ ರಾವ್ ಮೆಪೋಡು ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸಿಲಿಂಗ್ ನಡೆಸಬೇಕೆಂದು ಕೋರಿ ತಾರೀಕು 15.01.2019 ಕ್ಕೆ ಹರ್ಜಿ ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾದ-ವಿವಾದಗಳನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಡಾ.ವಿಜಯ ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸಲ್ಲಿಂಗ್ ನೆರವೇರಿಸಲು ಕೌನ್ಸಿಲರ್ಗೆ ನಿರ್ದೇಶನ ನೀಡಿದ್ದಾರೆ.