Monday, January 20, 2025
ಸುದ್ದಿ

ಪೊಳಲಿ ಹೊರಕಾಣಿಕೆಯಲ್ಲಿ ಸೆರೆಯಾದ ಬಲು ಅಪರೂಪದ ಚಿತ್ರ – ಕಹಳೆ ನ್ಯೂಸ್

ಬಂಟ್ವಾಳ: ಪರಶುರಾಮ ಸೃಷ್ಟಿಯ ತುಳುನಾಡು ದೈವ ದೇವಾಲಯಗಳ ಬೀಡು. ಸಕಲ ಭಕ್ತರ ಸಂಕಷ್ಟಗಳನ್ನ ನಿವಾರಿಸುತ್ತಿರುವ ಶಾಂತಿಧಾಮ. ತುಳುನಾಡಿನಲ್ಲಿ ಕಾರ್ಣಿಕ ಶಕ್ತಿಗಳು  ಭಕ್ತರ ಸಕಲ ಕಷ್ಟಗಳನ್ನ ನಿವಾರಿಸುತ್ತಿದೆ. ಇಂತಹ ಕ್ಷೇತ್ರಗಳಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರವೂ ಒಂದು.

ಬಂಟ್ವಾಳದ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯವು ಪಲ್ಗುಣಿ ನದಿಯ ತಟದಲ್ಲಿ ನಿಂತಿದ್ದು, ರಾಜರಾಜೇಶ್ವರಿ ದೇವಿ ಇಲ್ಲಿನ ಅಧಿದೇವತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಶ್ಚಿಮ ಘಟ್ಟದಲ್ಲಿರುವ ಕುದುರೆ ಮುಖದಿಂದ ಈ ನದಿ ಹರಿದು ಪೊಳಲಿಯ ಉತ್ತರ ಪಾಶ್ರ್ವದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು ವಾಯುವ್ಯ ದಿಕ್ಕಿನಲ್ಲಿ ತಿರುಗಿ ದಕ್ಷಿಣಾಭಿಮುಖವಾಗಿ ಹರಿಯುತ್ತಿದೆ. ಇದರ ಪೂರ್ವ ದಿಕ್ಕಿನಲ್ಲಿ ರೆಂಜೆಗಿರಿ ಬೆಟ್ಟ ಹಾಗೂ ಬಯಲುಬೆಟ್ಟು ಗದ್ದೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರ್ಷಂಪ್ರತಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವದಂದು ಭಕ್ತರು ಭಕ್ತಿ ಭಾವದಿಂದ ಹೊರಕಾಣಿಕೆ ಹೊತ್ತು ತರುತ್ತಾರೆ. ಅಂತೇಯೆ 15 02 1987ರ ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಹೊರಕಾಣಿಕೆಯ ಬಲು ಅಪರೂಪದ ಚಿತ್ರವೊಂದು ಎಲ್ಲರ ಕಣ್ಮಣ ಸೆಳೆಯುತ್ತಿದೆ .

ಅಪಾರ ಸಂಖ್ಯೆಯ ಭಕ್ತರ ದಂಡು, ಕೈಯಲ್ಲಿ ಅಕ್ಕಿ ಮುಡಿ,  ಅಡಿಕೆ, ಸಿಯಾಳ. ತರಕಾರಿ ಹೀಗೆ ಒಂದೊಂದು  ಹೊರಕಾಣಿಕೆಯನ್ನು ಹೊತ್ತುಕೊಂಡಿದ್ದಾರೆ, ಇದು ಉಳಿಪ್ಪಾಡಿಗುತ್ತಿನ ಮನೆಯಿಂದ ಆಗಮಿಸಿದ ಹೊರಕಾಣಿಕೆಯಾಗಿದ್ದು, ಇಲ್ಲಿ ಸಿಯಾಳವನ್ನು ಹೊತ್ತಿರುವವರು ಬಂಟ್ವಾಳದ ಈಗಿನ ಶಾಸಕರು ಹಾಗೂ 2019ರ ಬ್ರಹ್ಮಕಲಶೋತ್ಸದ ಅಧ್ಯಕ್ಷರು ಆಗಿರುವ ರಾಜೇಶ್ ನಾೈಕ್.

ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ಹೊರಕಾಣಿಕೆ ಹೊತ್ತೋಯ್ಯುತ್ತಿರುವ ಬಲು ಅಪರೂಪದ ಚಿತ್ರ ಇದಾಗಿದೆ.