Tuesday, January 21, 2025
ಸುದ್ದಿ

ಮೂರು ದಿನಗಳಿಂದ ಸ್ಥಿರವಾಗಿದ್ದ ಡೀಸೆಲ್ ಬೆಲೆ ಇಂದು ಏರಿಕೆ – ಕಹಳೆ ನ್ಯೂಸ್

ನವದೆಹಲಿ: ಮೂರು ದಿನಗಳಿಂದ ಸ್ಥಿರವಾಗಿದ್ದ ಡೀಸೆಲ್ ಬೆಲೆ ಇಂದು ಏರಿಕೆ ಕಂಡಿದೆ. ಗುರುವಾರ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಪೆಟ್ರೋಲ್ ಬೆಲೆಯಲ್ಲಿ ಗುರುವಾರ ಯಾವುದೇ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 70 ರೂಪಾಯಿ 44 ಪೈಸೆಗೆ ಮಾರಾಟವಾಗ್ತಿದೆ.

ಡೀಸೆಲ್ ಬೆಲೆ 5 ಪೈಸೆ ಹೆಚ್ಚಳ ಕಂಡಿದ್ದು, ಲೀಟರ್ ಗೆ 65 ರೂಪಾಯಿ 56 ಪೈಸೆಯಾಗಿದೆ. ಇದಕ್ಕಿಂತ ಮೊದಲು ಸತತ 7 ದಿನಗಳ ಕಾಲ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಲೀಟರ್ ಪೆಟ್ರೋಲ್ 72 ರೂಪಾಯಿ 76 ಪೈಸೆಗೆ ಮಾರಾಟವಾಗ್ತಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 5 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ಗುರುವಾರ 67 ರೂಪಾಯಿ 72 ಪೈಸೆಗೆ ಮಾರಾಟವಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾಗುವ ಬದಲಾವಣೆ ಪೆಟ್ರೋಲ್-ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರುತ್ತದೆ.