Tuesday, January 21, 2025
ಸುದ್ದಿ

ಪಶ್ಚಿಮ ವಲಯದ ಪೊಲೀಸರಿಂದ ದಿಢೀರನೇ ರೌಡಿಗಳ ಮನೆ ಮೇಲೆ ದಾಳಿ – ಕಹಳೆ ನ್ಯೂಸ್

ಬೆಂಗಳೂರು : ದಕ್ಷಿಣ ವಿಭಾಗದ ಬಳಿಕ ಪಶ್ಚಿಮ ವಲಯದ ಪೊಲೀಸರು, ಮಂಗಳವಾರ ರಾತ್ರಿ ದಿಢೀರನೇ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. 

ಪಶ್ಚಿಮ ವಿಭಾಗದ ಸುಮಾರು 300 ಕ್ಕೂ ಹೆಚ್ಚಿನ ರೌಡಿಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಪಾತಕಿಗಳ ಆದಾಯ ಮೂಲದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ಪ್ರತಿಯೊಬ್ಬರ ಮೊಬೈಲ್ ಸಂಖ್ಯೆ ಪಡೆದ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ 1 ಗಂಟೆ ಬಳಿಕ ತಮ್ಮ ವಿಭಾಗದ ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳ ಜತೆ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಕಾರ್ಯಾಚರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ರೌಡಿಗಳಿಗೆ ಚುರುಕು ಮುಟ್ಟಿಸಿದ್ದರು.