Tuesday, November 26, 2024
ರಾಜಕೀಯಸುದ್ದಿ

ರಾಜ್ಯ ಸರ್ಕಾರದ ಬಜೆಟ್ ಗೊಂದಲ: ಗದ್ದಲದ ನಡುವೆ ಬಜೆಟ್ ಮುಂದೂಡಿಕೆ – ಕಹಳೆ ನ್ಯೂಸ್

ಅನೇಕ ಕುತೂಹಲದ ಆಗರವಾಗಿರುವ ರಾಜ್ಯ ಸರ್ಕಾರದ ಬಜೆಟ್ ಗೊಂದಲ,ಪ್ರತಿಭಟನೆ.ಗದ್ದಲಕ್ಕೆ ಬಲಿಯಾಗಿ ಬಜೆಟ್ ಮುಂದೂಡಿಕೆಯಾಗಿದೆ. ಬಿಜೆಪಿ ಶಾಸಕರು ಸದನದ ಬಾವಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಗದ್ದಲವನ್ನು ಕೆಲಹೊತ್ತು ವೀಕ್ಷಿಸಿದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಸದನವನ್ನು ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಮುಂದೂಡಿದರು. ಬಜೆಟ್ ಅಧಿವೇಶನದ ಮೊದಲ ದಿನವೂ ಬಿಜೆಪಿ ಶಾಸಕರು ಗದ್ದಲ ನಡೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಡಿಕೆಯಂತೆ ನಡೆಯುವ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಇದರಿಂದ 22 ಪುಟಗಳ ಭಾಷಣದಲ್ಲಿ ಕೇವಲ ೨ ಪುಟಗಳನ್ನು ಓದಿದ್ದ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ ಸದನದಿಂದ ತೆರಳಿದ್ದರು. ನಂತರವೂ ಬಿಜೆಪಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ,ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಜೆಟ್ ಅಧಿವೇಶನ ಅರ್ಥಹೀನ, ಸರ್ಕಾರಕ್ಕೆ ಸಂಖ್ಯಾಬಲವಿಲ್ಲ: ಶ್ರೀರಾಮುಲು
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಪುನಃ ಸದನದ ಬಾವಿಗಿಳಿದು ಪ್ರತಿಭಟನೆ ಶುರು ಮಾಡಿದರು. ‘ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ’ ಎಂದು ಘೋಷಣೆಗಳನ್ನು ಕೂಗಿದರು.