Sunday, January 19, 2025
ಸುದ್ದಿ

ಮೇಯರ್ ಹೊಟ್ಟೆಗೆ ಸಿಎಂ ಪಂಚ್ | ಸಭ್ಯತೆಯ ಎಲ್ಲೆ ಮೀರಿದ ಸಿಎಂ ವಿರುದ್ಧ ವ್ಯಾಪಕ ಖಂಡನೆ.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರಿಗೆ ಕರಾಟೆ ಪಂಚ್‌ ನೀಡಿರುವ ಫೋಟೋ ವಿಡಿಯೋಗಳು ಇದೀಗ ಫ‌ುಲ್‌ ವೈರಲ್‌ ಆಗಿವೆ.

ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌ 2017 ರ ಉದ್‌ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕರಾಟೆ ಪಟುವಾಗಿರುವ ಮೇಯರ್‌ ಕವಿತಾ ಸನಿಲ್‌ ಅವರು ಸಿಎಂಗೆ 2 ಪಂಚ್‌ ನೀಡಿದರೆ ಮುಖ್ಯಮಂತ್ರಿಗಳೂ ತಿರುಗೇಟು ನೀಡಿ ಮೇಯರ್‌ ಹೊಟ್ಟೆಗೆ ಪಂಚ್‌ ನೀಡಿದರು. ಈ ವೇಳೆ ನೆರೆದಿದ್ದವರೆಲ್ಲಾ ಗೊಳ್ಳನೆ ನಕ್ಕರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಸಭ್ಯತೆ ಅಲ್ಲ!

ಹೆಣ್ಣುಮಕ್ಕಳ ಜೊತೆ ಸಾರ್ವಜನಿಕ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರ ಈ ವರ್ತನೆ ಈಗ ತೀರ್ವ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಲ್ಲಿ ಸಿಎಂ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ಸಭ್ಯತೆ ಅಲ್ಲ ಎಂದು ಜನ ಮಾತಾಡುತ್ತಿದ್ದಾರೆ.

Leave a Response