Tuesday, November 26, 2024
ಸುದ್ದಿ

ರೈತರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ – ಕಹಳೆ ನ್ಯೂಸ್

ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ರೈತರಿಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ರೆಪೋ ದರವನ್ನು ಕಡಿತ ಮಾಡುವ ಮೂಲಕ ಮನೆ ಹಾಗೂ ವಾಹನ ಸಾಲ ಪಡೆಯುವ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ಇಳಿಕೆಯ ಭರವಸೆ ಮೂಡಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಮತ್ತೊಂದು ವಿಚಾರವನ್ನ ಬಹಿರಂಗ ಪಡಿಸಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಹಿಂದೆ ಯಾವುದೇ ಆಧಾರ/ಜಾಮೀನು ನೀಡದೆ 1 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯುವ ಸೌಲಭ್ಯವಿದ್ದು, ಈಗ ಈ ಮಿತಿಯನ್ನು 1.60 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2010 ರಲ್ಲಿ ಆಧಾರ/ಜಾಮೀನು ನೀಡದೆ ರೈತರ ಸಾಲ ಪಡೆಯುವ ಮಿತಿಯನ್ನು ಒಂದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಮೊತ್ತವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಫೆಬ್ರವರಿ ೧ ರಂದು ಕೇಂದ್ರ ಬಜೆಟ್ ಮಂಡಿಸಿದ ಪಿಯೂಶ್ ಗೋಯಲ್ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯನ್ನು ಘೋಷಿಸಿದ್ದು, ಇದರಿಂದಾಗಿ ರೈತರ ಖಾತೆಗಳಿಗೆ ಆರು ಸಾವಿರ ರೂ. ನೇರವಾಗಿ ಜಮಾ ಆಗಲಿದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಕೊಡುಗೆಯನ್ನು ಘೋಷಿಸಿದೆ.